ದ್ವೀಪವಾದ ಕಲ್ಲುಗುಂಡಿ
ಹತ್ತಾರು ಮನೆಗಳು ಜಲಾವೃತ
ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸುತ್ತಿರುವ ಊರವರು
ಧಾರಾಕಾರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ಪಯಸ್ವಿನಿ ನದಿ ಉಕ್ಕಿ ಹರಿದು ಇಡೀ ಕಲ್ಲುಗುಂಡಿ ಪೇಟೆ ನೀರಲ್ಲಿ ಮುಳುಗಿದೆ. ರಸ್ತೆಗಿಂತ ತಗ್ಗು ಪ್ರದೇಶದಲ್ಲಿರುವ ಮನೆಗಳು ಸಂಪೂರ್ಣ ಜಲಾವೃತವಾಗಿದ್ದು ಜನರು ಭಯದಿಂದ ಚೀರಾಡತೊಡಗಿದ್ದಾರೆ. ಜಲಾವೃತವಾದ ಮನೆಗಳಿಂದ ಜನರನ್ನು ಸುರಕ್ಷಿತ ಜಾಗಕ್ಕೆ ಕರೆತರುವ ಪ್ರಯತ್ನದಲ್ಲಿ ಊರವರು ತೊಡಗಿದ್ದಾರೆ. ಕಲ್ಲುಗುಂಡಿ ಅಕ್ಷರಶಃ ದ್ವೀಪವಾಗಿದೆ.
ಸುಳ್ಯದಿಂದ ಕಲ್ಲುಗುಂಡಿಗೆ ತಲುಪುವ ರಸ್ತೆಯ ಮಧ್ಯೆ ಕಲ್ಲುಗುಂಡಿ ಸಮೀಪ ಮರವೊಂದು ರಸ್ತೆಗಡ್ಡವಾಗಿ ಮಗುಚಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ. ಈ ಮರವನ್ನು ತುಂಡರಿಸಿ ತೆಗೆದು ರಸ್ತೆ ಸಂಚಾರ ಪುನರಾರಂಭಿಸಲು ಗ್ರಾ.ಪಂ. ಅಧ್ಯಕ್ಷ ಜಿ.ಕೆ.ಹಮೀದ್ ನೇತೃತ್ವದ ತಂಡ ಪ್ರಯತ್ನ ನಡೆಸುತ್ತಿದೆ.
https://youtube.com/shorts/nhPlfeLs6tg?feature=share
https://youtube.com/shorts/I9un67P3q1U?feature=share
https://youtube.com/shorts/-iUW694y_80?feature=share