ನಿರಂತರ ಸುರಿದ ಮಳೆಗೆ ಕೊಲ್ಲಮೊಗ್ರದಲ್ಲಿ ಅಪಾರ ಹಾನಿ

0

 

ನಿರಂತರವಾಗಿ ನಿನ್ನೆ ಸಂಜೆ ಸುರಿದ ಸುರಿದ ಮಳೆಯಿಂದ ಭಾರಿ ಅವಾಂತರ ಸೃಷ್ಟಿಸಿದೆ.
ಕೊಲ್ಲಮೊಗ್ರ ದೋಲನಮನೆ ಎಂಬಲ್ಲಿ ಅನೇಕ ಮನೆಗಳಿಗೆ ನೀರು ನುಗ್ಗಿದೆ. ದೋಲನ ಮನೆ ಎಂಬಲ್ಲಿ ನದಿಯ ಪ್ರಭಾವಕ್ಕೆ ಸಿಲುಕಿ ಒಂದು ಕುಸಿತ ಗೊಂಡಿದೆ. ಅದೇ ಮನೆಯ ಜಾನುವಾರು ಒಂದು ನೀರಿನಲ್ಲಿ ಮುಳುಗಿ ಮೃತಪಟ್ಟಿದೆ. ಅನೇಕರು ಮನೆಗಳನ್ನು ಬಿಟ್ಟು ಬೇರೆ ಬೇರೆ ಕಡೆಗೆ ಸ್ಥಳಾಂತರ ಗೊಂಡ ಘಟನೆ ವರದಿಯಾಗಿದೆ. ಇನ್ನು ಕೆಲವರು ಮನೆಯಿಂದ ಹೊರಕ್ಕೆ ಹೋಗಲಾಗದೆ ಮುಂಜಾನೆ ತನಕ ಮನೆಯ ಅಟ್ಟದಲ್ಲಿ ಉಳಿದು ಕೊಂಡ ಘಟನೆ ನಡೆದಿದೆ.