ಇಂದು ಸುಬ್ರಹ್ಮಣ್ಯ ,ಹರಿಹರ,ಕೊಲ್ಲಮೊಗ್ರ,ಕಲ್ಲುಗುಂಡಿಗೆ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಭೇಟಿ

0

 

ಮಳೆಯಿಂದಾಗಿ ಹಾನಿಗೆ ಒಳಗಾಗಿರುವ
ಸುಬ್ರಮಣ್ಯ ,ಹರಿಹರ,ಕೊಲ್ಲಮೊಗ್ರ,ಕಲ್ಲುಗುಂಡಿಗೆ ಆ.02 ರಂದು ಬೆಳಿಗ್ಗೆ 9 ಘಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ವಿ ಸುನಿಲ್ ಕುಮಾರ್ ರವರು ಭೇಟಿ ನೀಡಲಿದ್ದಾರೆ.

ಸದ್ಯ ಬಾಗಲಕೋಟೆ ಜಿಲ್ಲಾ ಪ್ರವಾಸದಲ್ಲಿರುವ ಸಚಿವರು ವಿಜಯಪುರ ಜಿಲ್ಲೆಯ ಪ್ರವಾಸವನ್ನು ರದ್ದು ಮಾಡಿ ಮಂಗಳೂರಿಗೆ ತೆರಳಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿರುವ ಸಚಿವರು ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆಂದು ತಿಳಿದು ಬಂದಿದೆ.