ಕೆ.ವಿ.ಜಿ‌.ಪಾಲಿಟೆಕ್ನಿಕ್ ಪ್ಲೇಸ್ ಮೆಂಟ್ ವಿಭಾಗದಿಂದ ವೃತ್ತಿ ಮಾರ್ಗದರ್ಶನ

0

 

p>

ಸುಳ್ಯದ ಕೆ.ವಿ.ಜಿ.ಪಾಲಿಟೆಕ್ನಿಕ್ ನ ಅಂತಿಮ ವರ್ಷದ ಅಟೊಮೊಬೈಲ್ ಹಾಗೂ ಮೆಕ್ಯಾನಿಕಲ್ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಸುರಕ್ಷ ಕ್ಯಾರಿಯರ್ ಅಕಾಡೆಮಿ ಯವರಿಂದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

 


ಸುರಕ್ಷಾ ಅಕಾಡೆಮಿಯ ತರಬೇತಿ ನಿರ್ದೇಶಕ ಮಧುಸೂದನ್ ಹಾಗೂ ಆಡಳಿತ ನಿರ್ದೇಶಕ ಸತ್ಯನಾರಾಯಣ ಮಾತನಾಡಿ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಇರುವ ವ್ರತ್ತಿ ಅವಕಾಶಗಳು, ಇಂದು ಕೈಗಾರಿಕೊದ್ಯಮದಲ್ಲಿ ಡಿಪ್ಲೊಮಾ ಇಂಜಿನಿಯರ್ ಗಳ ಪಾತ್ರದ ಬಗ್ಗೆ ಮಾಹಿತಿ ನೀಡಿದರು ಹಾಗೂ ಅದಕ್ಕೆ ಪೂರಕವಾದ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಅಭಿವ್ರದ್ಧಿ ಪಡಿಸಿಕೊಳ್ಳ ಲು ವಿವಿಧ ಕಾರ್ಯಕ್ರಮಗಳ ಮೂಲಕ ಕೆ.ವಿ.ಜಿ.ಪಾಲಿಟೆಕ್ನಿಕ್ ನ ಆಡಳಿತ ಮಂಡಳಿ ವಹಿಸುತ್ತಿರುವ ಶ್ರಮವನ್ನು ಶ್ಲಾಘಿಸಿದರು.

 

ಕಾಲೇಜಿನ ಅಕಾಡೆಮಿಕ್ ಡೀನ್ ಚಂದ್ರಶೇಖರ ಎಂ.ಎನ್. ಸ್ವಾಗತಿಸಿ, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಚಾಲಕ ವಿವೇಕ್ ಪಿ ವಂದಿಸಿದರು. ಪ್ಲೇಸ್ ಮೆಂಟ್ ಅಧಿಕಾರಿ ರಂಗಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here