ಕಲ್ಲುಗುಂಡಿ: ಭಾರೀ ಮಳೆಗೆ ದನದ ಕೊಟ್ಟಿಗೆ ಕುಸಿತ

0

 

ಮನೆಯ ಗೋಡೆ ಬಿರುಕು – ತೋಟದಲ್ಲಿ ಸ್ಪಿಂಕ್ಲರ್ – ಪೈಪುಗಳಿಗೆ ಹಾನಿ

ಕಲ್ಲುಗುಂಡಿಯ ಚರ್ಚ್ ಬಳಿಯಿರುವ ಮೆಲ್ವಿನ್ ಎಂಬವರ ದನದ ಕೊಟ್ಟಿಗೆ ಆ.1ರಂದು ರಾತ್ರಿ ಸುರಿದ ಭಾರೀ ಮಳೆಗೆ ಕುಸಿದು ಬಿದ್ದಿದ್ದು, ಮನೆಯ ಗೋಡೆಯೂ ಬಿರುಕು ಬಿಟ್ಟಿದೆ.

 

 

ತೋಟದಲ್ಲಿದ್ದ ಸ್ಪಿಂಕ್ಲರ್ ಪೈಪುಗಳಿಗೆ ಹಾನಿಯಾಗಿದ್ದು, ಪಯಸ್ವಿನಿ ನದಿ ನೀರು ಉಕ್ಕಿ ಬಂದ ಪರಿಣಾಮವಾಗಿ ಅಡಿಕೆ ತೋಟಕ್ಕೆ ಹಾಕಿದ್ದ ಗೊಬ್ಬರಗಳೂ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವುದಾಗಿ ತಿಳಿದುಬಂದಿದೆ.