ಯೇನೆಕಲ್ಲು: ನೆರೆ ಸಂತ್ರಸ್ತರಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ಉಪಹಾರದ ವ್ಯವಸ್ಥೆ

0

 

 

ಕಡಬ ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಯೇನೆಕಲ್ಲಿಗೆ ಆಗಮನ

ಯೇನೆಕಲ್ಲು ಭಾಗದಲ್ಲಿ ನಿನ್ನೆ ಸುರಿದ ಮಳೆಗೆ ಹಲವು ಮನೆಗಳಿಗೆ ನೆರೆ ನೀರು ನುಗ್ಗಿದ್ದು, ಸಂತ್ರಸ್ತರಿಗೆ ಆ. 2ರ ಬೆಳಿಗ್ಗೆ ಉಪಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ಮಾಡಲಾಯಿತು.ಯೇನೆಕಲ್ಲು ಪ್ರಾ.ಕೃ.ಪ.ಸ.ಸಂಘದ ಆವರಣದಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಂಘದ ಅಧ್ಯಕ್ಷ ಭವಾನಿಶಂಕರ ಪೂಂಬಾಡಿ, ಉಪಾಧ್ಯಕ್ಷ ಭರತ್ ನೆಕ್ರಾಜೆ ಸೇರಿದಂತೆ ಸಂಘದ ಸದಸ್ಯರು, ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಕಡಬ ತಾಲೂಕು ತಹಶೀಲ್ದಾರ್ ಅನಂತ ಶಂಕರ್, ಕಂದಾಯ ನಿರೀಕ್ಷಕರಾದ ಅವಿನ್ ರಂಗತ್ತಮಲೆ, ಉಪ ತಹಶಿಲ್ದಾರ್ ಮನೋಹರ್, ಸೇರಿದಂತೆ ಗ್ರಾಮ ಲೆಕ್ಕಾಧಿಕಾರಿಗಳು, ಸುಬ್ರಹ್ಮಣ್ಯ ಪಿ.ಡಿ.ಒ. ಯು.ಡಿ. ಶೇಖರ್ ಮತ್ತು ಇತರ ಇಲಾಖಾ ಸಿಬ್ಬಂದಿಗಳು ಯೇನೆಕಲ್ಲಿಗೆ ಮುಂಜಾನೆಯೇ ಆಗಮಿಸಿ ಸಂತ್ರಸ್ತರಿಂದ ಮಾಹಿತಿ ಪಡೆದುಕೊಂಡರು.