ಕಲ್ಲುಗುಂಡಿ ಒತ್ತೆಕೋಲ ಗದ್ದೆಯ ಬಳಿಯೂ ಎರಡು ಮನೆಗಳಿಗೂ ನೀರು ನುಗ್ಗಿ ಅಪಾರ ನಷ್ಟ

0

 

ಅಡುಗೆ ಮನೆಯ ಒಂದು ಭಾಗ ಕುಸಿತ

ಅರೆಕಲ್ಲು ಗುಡ್ಡ ಪ್ರದೇಶದಲ್ಲಿ ಮೇಘಸ್ಪೋಟದಿಂದಾಗಿ ಕಲ್ಲುಗುಂಡಿ ಒತ್ತೆಕೋಲ ಗದ್ದೆ ಹಿಂಬದಿಯಲ್ಲಿರುವ ದೇವಕಿ ಬಾಚಿಗದ್ದೆ ಹಾಗೂ ಕಮಲ ಬಾಚಿಗದ್ದೆ ಅವರ ಮನೆಗೂ ನೀರು ನುಗ್ಗಿದ್ದು, ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿರುವುದಾಗಿ ತಿಳಿದುಬಂದಿದೆ.


ರಾತ್ರಿ 12.30ರ ವೇಳೆಗೆ ನೀರು ಮನೆಯ ಅಂಗಳವನ್ನು ಆವರಿಸುತ್ತಾ ಬಂದು ಮನೆಯೊಳಗೆ ನೀರು ಆವರಿಸಿತೆನ್ನಲಾಗಿದೆ. ಇದರಿಂದಾಗಿ ದೇವಕಿ ಅವರ ಅಡುಗೆ ಮನೆಯ ಒಂದು ಭಾಗ ಕುಸಿದು ಬಿದ್ದಿದ್ದು, ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿರುವುದಾಗಿ ತಿಳಿದುಬಂದಿದೆ.
ನೆರೆನೀರು ಮನೆಯನ್ನು ಆವರಿಸುತ್ತಿದ್ದಂತೆ ದೇವಕಿ ಅವರ ಮಗ ಸುಧಾಕರ ಅವರು ತಮ್ಮ ಅಟೋರಿಕ್ಷಾದಲ್ಲಿ ಎರಡೂ ಮನೆಯವರನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರ ಮಾಡಿದರೆಂದು ತಿಳಿದುಬಂದಿದೆ.