ಗುತ್ತಿಗಾರು : ಗ್ರಾಮ ಚದುರಂಗ ಆಟ ಆಡೋಣ ಅಭಿಯಾನ

0
154

 

p>

ಗುತ್ತಿಗಾರು ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಓದುವ ಬೆಳಕು ಕಾರ್ಯಕ್ರಮದ ಅಡಿಯಲ್ಲಿ ಅಂತರಾಷ್ಟ್ರೀಯ ಚೆಸ್ ದಿನದ ಅಂಗವಾಗಿ ನಡೆದ ಸ್ಪರ್ಧಾ ಕಾರ್ಯಕ್ರಮಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಧನಪತಿ ಇವರು ಗುತ್ತಿಗಾರು ಪ್ರೌಢಶಾಲೆಯಲ್ಲಿ ಚಾಲನೆ ನೀಡಿದರು. ಚೆಸ್ ತರಬೇತಿಯನ್ನು ಶಿಕ್ಷಕ ಶ್ರೀ ಪ್ರಸನ್ನ ಇವರು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನೀಡಿದರು.

 

ಸುಮಾರು 14 ವಿದ್ಯಾರ್ಥಿಗಳು ಚದುರಂಗ ಆಟ ಆಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.  ಮಾ/ ಸಂಪ್ರೀತ್ ಕೆ.ಹೆಚ್ ಮತ್ತು ಕು/ ರಕ್ಷಿತಾ ಕೆ.ಎಸ್ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದರು. ಇವರನ್ನು ಗ್ರಾಮ ಪಂಚಾಯತಿ ವತಿಯಿಂದ ಮುಖ್ಯ ಶಿಕ್ಷಕರು  ನೆಲ್ಸನ್ ಕ್ಯಾಸ್ಟಲಿನೊ ಇವರು ಪುಸ್ತಕ ನೀಡಿ ಅಭಿನಂದಿಸಿದರು. ಗ್ರಂಥಾಲಯ ಮೇಲ್ವಿಚಾರಕಿ ಶ್ರೀಮತಿ ಅಭಿಲಾಷ ಮೋಟ್ನೂರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಪಂಚಾಯತ್ ಬಿಲ್ ಕಲೆಕ್ಟರ್  ಜಯಪ್ರಕಾಶ್ ಸಹಕರಿಸಿದರು.

LEAVE A REPLY

Please enter your comment!
Please enter your name here