ಕಲ್ಲುಗುಂಡಿ : ಜಲಸ್ಫೋಟಕ್ಕೆ ಮನೆಯೊಳಗೆ ಭಾರೀ ಬಿರುಕು

0
383

  ನಿನ್ನೆ ರಾತ್ರಿ ಉಂಟಾದ ಜಲ ಸ್ಫೋಟಕ್ಕೆ ಕಲ್ಲುಗುಂಡಿ ಕೂಲಿಶೆಡ್ ಬಳಿ ಅಬ್ದುಲ್ಲಾ ಸಿ ಕೆ  ಎಂಬುವವರ ಮನೆಯ ಕೋಣೆಯೊಳಗೆ ನೆಲ ಸ್ಪೋಟಗೊಂಡು ಭಾರಿ ಬಿರುಕು  ಉಂಟಾಗಿದೆ.

p>


ಇದರೊಂದಿಗೆ ನೆರೆ ನೀರು ಮನೆಯನ್ನು ಸಂಪೂರ್ಣ ಆವರಿಸಿ ಮನೆಯ ಎಲೆಕ್ಟ್ರಾನಿಕ್ ಉಪಕರಣಗಳು ಸೇರಿದಂತೆ  ಎಲ್ಲಾ ವಸ್ತುಗಳಿಗೂ ಹಾನಿ ಉಂಟಾಗಿದೆ.
ನೆಲ ಬಿರುಕು ಬಿಟ್ಟ ಸ್ಥಳದ ಹಿಂಬದಿಯಲ್ಲಿ  ಬಾವಿ ಇದ್ದು ಮನೆಯವರು ಆತಂಕ ವ್ಯಕ್ತಪಡಿಸಿದ್ದಾರೆ.
ಘಟನೆ ನಡೆದ ಸಂದರ್ಭ  ಮನೆಯ ಸದಸ್ಯರು ಮಂಗಳೂರು ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದರೆಂದು  ತಿಳಿದುಬಂದಿದೆ.

LEAVE A REPLY

Please enter your comment!
Please enter your name here