ಕಲ್ಲುಗುಂಡಿ :  ಬಡ ವೃದ್ಧೆಯ ಅಡುಗೆ ಮನೆಯ ಸಾಮಾಗ್ರಿಗಳು ನೀರುಪಾಲು

0

 

ಕಲ್ಲುಗುಂಡಿ ಮುಖ್ಯ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದ ಜೈನಬ ಎಂಬುವವರ ಮನೆಗೆ ನಿನ್ನೆ ರಾತ್ರಿ ನೀರು ನುಗ್ಗಿ ಮನೆಯ ಅಡುಗೆ ಪಾತ್ರೆಗಳು ಮತ್ತು ಗ್ಯಾಸ್ ಸಿಲೆಂಡರ್ ಆಹಾರ ಧಾನ್ಯ ಸಮಾಗ್ರಿಗಳು ಕೊಚ್ಚಿಹೋಗಿದೆ.


ಸುದ್ದಿಯೊಂದಿಗೆ ಮಾತನಾಡಿದ ಅವರು ನಾನು ಮತ್ತು ನನ್ನ 18 ವರ್ಷದ ಮಗ ಮಾತ್ರ ಈ ಮನೆಯಲ್ಲಿ ಇದ್ದು ಸ್ಥಳೀಯ ಕೂಲಿ ಕೆಲಸದವರಿಗೆ ಆಹಾರ ಪದಾರ್ಥಗಳನ್ನು ಮಾಡಿಕೊಟ್ಟು ಜೀವನ ಸಾಗಿಸುತಿದ್ದೆ.
ನಿನ್ನ ರಾತ್ರಿ ಏಕಾಏಕಿ ಮನೆಗೆ ನುಗ್ಗಿದ ನೆರೆ ನೀರು ಅಡುಗೆ ಕೋಣೆಯಲ್ಲಿ ಇದ್ದ ಎಲ್ಲಾ ಸಾಮಗ್ರಿಗಳನ್ನು ಕೊಚ್ಚಿಕೊಂಡು ಹೋಗಿದ್ದು ಭಾರಿ ನಷ್ಟ ಉಂಟಾಗಿದೆ ಎಂದು ಹೇಳಿದ್ದಾರೆ.