ಕಲ್ಲುಗುಂಡಿ: ನೀರಿನ ಪ್ರವಾಹಕ್ಕೆ ಸಂಪೂರ್ಣ ಬಿರುಕು ಬಿಟ್ಟ ಮನೆಯ ಗೋಡೆಗಳು

0

 

 

ಆತಂಕದಲ್ಲಿ ಮನೆ ಮಂದಿ

ಕಲ್ಲುಗುಂಡಿ ನಿನ್ನೆ ರಾತ್ರಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಕಲ್ಲುಗುಂಡಿ ಮುಖ್ಯ ರಸ್ತೆಯ ಬಳಿ ಪಿ ಕೆ ಮೊಯಿದು ಎಂಬುವರ ಮನೆಯ ಅಡುಗೆ ಕೋಣೆಯ ಗೋಡೆಗಳು ಸಂಪೂರ್ಣವಾಗಿ ಬಿರುಕು ಬಿಟ್ಟಿದ್ದು ಜರಿದು ಬೀಳುವ ಸ್ಥಿತಿಯಲ್ಲಿದೆ.


ನದಿಯ ದಡದಲ್ಲಿ ಈ ಮನೆ ಇದ್ದು ನಿನ್ನೆ ರಾತ್ರಿ ನದಿಯಲ್ಲಿ ಹರಿದು ಬಂದ ನೆರೆ ನೀರು ಮನೆಯೊಳಗೆ ನುಗ್ಗಿ ಮನೆಯ ಹಿಂಬದಿಯ ಅಡುಗೆ ಕೋಣೆಯನ್ನು ಸಂಪೂರ್ಣವಾಗಿ ಆವರಿಸಿದೆ.


ಹೊಳೆಯಲ್ಲಿ ನೀರು ಅರಿದು ಬಂದರ ರಭಸಕ್ಕೆ ತಳಬಾಗದಿಂದ ಮಣ್ಣು ಕುಸಿತ ಉಂಟಾಗಿ ಗೋಡೆಗಳು ಬಿರುಕು ಬಿಟ್ಟಿದ್ದು ಮನೆಯವರು ಆತಂಕದಲ್ಲಿದ್ದಾರೆ.