ಬೆಳ್ಳಾರೆ ಗ್ರಾಮ ಪಂಚಾಯತ್ ಗ್ರಂಥಾಲಯ

0

 

ಗ್ರಾಮ ಚದುರಂಗ ಅಟ ಆಡೋಣ ಅಭಿಯಾನ ಕಾರ್ಯಕ್ರಮ

ಬೆಳ್ಳಾರೆ ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಭಾರತ ಸ್ವಾತಂತ್ರ್ಯದ 75ರ ಸಂಭ್ರಮವನ್ನು ವೈವಿಧ್ಯಮಯವಾಗಿ ಆಚರಿಸಲಾಗುತ್ತಿರುವ ಭಾಗವಾಗಿ ಅಂತರಾಷ್ಟ್ರೀಯ ಚೆಸ್ ದಿನದ ಅಂಗವಾಗಿ ಗ್ರಾಮ ಪಂಚಾಯತ್ ಗ್ರಂಥಾಲಯದ ಓದುವ ಬೆಳಕು ಕಾರ್ಯಕ್ರಮದಡಿ ಗ್ರಾಮ ಚದುರಂಗ ಆಟ ಆಡೋಣ ಅಭಿಯಾನ ಕಾರ್ಯಕ್ರಮವು ಆ.1 ರಂದು ನಡೆಯಿತು.

ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ ಸಭಾಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಅನುಷಾ ಡಿ ಸ್ವಾಗತಿಸಿ ಓದುವ ಬೆಳಕು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು, ಸಭಾಧ್ಯಕ್ಷತೆ ವಹಿಸಿದ್ದ ಚಂದ್ರಶೇಖರ ಪನ್ನೆ ಇವರು ಕೆ.ಪಿ.ಎಸ್ ಶಾಲೆಯ ಮಕ್ಕಳನ್ನು ಉದ್ದೇಶಿಸಿ ಮಕ್ಕಳ ಬುದ್ಧಿಮಟ್ಟ ಹಾಗೂ ನೆನಪಿನ ಸಾಮರ್ಥ್ಯವನ್ನು ಹೆಚ್ಚಿಸಲು ಚದುರಂಗವು ಒಂದು ಉತ್ತಮ ಆಟವಾಗಿದೆ ಎಂದು ಮಕ್ಕಳನ್ನು ಪ್ರೋತ್ಸಾಹಿಸಿದರು, ಸಂಪನ್ಮೂಲ ವ್ಯಕ್ತಿಯಾದ ಸದಾಶಿವ ಗುಂಡಿಗದ್ದೆ ಇವರು ಆಟದ ಇತಿಹಾಸ ಹಾಗೂ ನಿಯಮಗಳನ್ನು ತಿಳಿಸಿ ಮಕ್ಕಳನ್ನು ಹುರಿದುಂಬಿಸಲು ಎರಡು ಸೆಟ್ ಚದುರಂಗ ಬೋರ್ಡು ಗ್ರಂಥಾಲಯಕ್ಕೆ ದೇಣಿಗೆಯಾಗಿ ನೀಡಿದರು, ಹರೀಶ್ ನೂಜಿ ಇವರು ನಿರ್ಣಾಯಕರಾಗಿ ಸಹಕರಿಸಿದರು ವೇದಿಕೆಯಲ್ಲಿ ಲೆಕ್ಕ ಸಹಾಯಕರಾದ ಶ್ರೀಮತಿ ಸುಶೀಲ ಹಾಜರಿದ್ದರು.
ಪಂಚಾಯತ್ ನ ಎಲ್ಲಾ ಸಿಬ್ಬಂದಿಗಳು ಕಾರ್ಯಕ್ರಮಕ್ಕೆ ಸಹಕರಿಸಿದರು.
ಮೇಲ್ವಿಚಾರಕಿ ಶಶಿಕಲಾ ಇವರು ವಂದಿಸಿದರು.