ಸುಳ್ಯದ ಸಂದೀಪ್ ರಿಗೆ ಉಪ ವಲಯಾರಣ್ಯಾಧಿಕಾರಿಯಾಗಿ ಪದೋನ್ನತಿ

0

 

ಕುದುರೆಮುಖ ಅರಣ್ಯ ವಲಯದಲ್ಲಿ ಅರಣ್ಯ ರಕ್ಷಕರಾಗಿದ್ದ ಸುಳ್ಯದ ಸಂದೀಪ್ ರವರು ಉಪವಲಯಾರಣ್ಯಾಧಿಕಾರಿಯಾಗಿ ಪದೋನ್ನತಿಗೊಂಡಿದ್ದಾರೆ.

2013 ರಲ್ಲಿ ಅರಣ್ಯ ರಕ್ಷಕರಾಗಿ ಸುಳ್ಯ ಅರಣ್ಯ ವಲಯದಲ್ಲಿ ಸೇವೆಗೆ ಸೇರಿದ ಸಂದೀಪ್ ರವರು 2019 ರಲ್ಲಿ ಸುಳ್ಯದಿಂದ ಕುದುರೆಮುಖ ಅರಣ್ಯ ವಲಯಕ್ಕೆ ವರ್ಗಾವಣೆಯಾದರು. ಇದೀಗ ಅವರು ಉಪ ವಲಯಾರಣ್ಯಾಧಿಕಾರಿಯಾಗಿ ಪದೋನ್ನತಿ ಗೊಂಡಿದ್ದಾರೆ. ಇವರು ಸುಳ್ಯ ಅಂಬಟೆಡ್ಕ ನಿವಾಸಿ, ಕೆಎಫ್ ಡಿಸಿ ಯಲ್ಲಿ ಡ್ರೈವರ್ ಆಗಿದ್ದ ಶಾಂತಪ್ಪ ಹಾಗೂ ಶ್ರೀಮತಿ ಗಿರಿಜಾ ದಂಪತಿಗಳ ಪುತ್ರ.