ಹರಿಹರ: ನೀರಿಗೆ ಬಿದ್ದ ಕ್ರೇನ್ ಆಪರೇಟರ್

0

 

ನೀರಿಗೆ ಹಾರಿ ರಕ್ಷಿಸಿದ ಸೋಮಶೇಖರ ಕಟ್ಟೆಮನೆ

ಹರಿಹರ ದಲ್ಲಿ ಪ್ರವಾಹ ಸ್ಥಳದಲ್ಲಿ ಮರ ತೆರವು ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕ್ರೇನ್ ಆಪರೇಟರ್ ಶರೀಪ್ ಎಂಬವರು ನದಿಗೆ ಬಿದ್ದು ಅವರನ್ನು ರಕ್ಷಿಸಿದ ಘಟನೆ ಇಂದು ವರದಿಯಾಗಿದೆ.

ಅಪರೇಟರ್ ನೀರಿಗೆ ಬಿದ್ದ ತಕ್ಷಣ ಸೋಮಶೇಖರ್ ಕಟ್ಟೆಮನೆ ಎಂಬವರು ನೀರಿಗೆ ಹಾರಿದರೆ, ಉಳಿದವರು ಹಗ್ಗ ಇಳಿಸಿದ್ದಾರೆ. ಅಲ್ಲೇ ಇದ್ದ ಜೆ ಸಿ ಬಿ ಸಹಾಯ ಬಳಸಿ ಅವರನ್ನು ರಕ್ಷಿಸಲಾಯಿತು. ಸೋಮಶೇಖರ ಶೇಖರ್ ಅವರ ಕಾರ್ಯ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ.