ಆಲೆಟ್ಟಿ:  ಮಿತ್ತಡ್ಕ ಬಳಿ ಮನೆಯ ಒಳಗೆ ನುಗ್ಗಿದ ನದಿ ನೀರು

0
793

 

p>

 

ಆಲೆಟ್ಟಿ ಗ್ರಾಮದ ಮಿತ್ತಡ್ಕ ಕುದ್ಕುಳಿ ಎಂಬಲ್ಲಿ ಪಯಸ್ವಿನಿ ನದಿಯ ನೀರು ಉಕ್ಕಿ ಹರಿದ ಪರಿಣಾಮ ವಿಶಾಲಾಕ್ಷಿ ಹಾಗೂ ಮೀನಾಕ್ಷಿ ಎಂಬವರ ಮನೆ ಒಳಗೆ ನೀರು ನುಗ್ಗಿದೆ. ಇಂದು ಮುಂಜಾನೆ ವೇಳೆ ಮನೆಯವರು ಮಲಗಿ ನಿದ್ರಿಸುತ್ತಿದ್ದ ಸಂದರ್ಭದಲ್ಲಿ ನೀರು ಮನೆಯ ಸುತ್ತ ಆವರಿಸಿಕೊಂಡಿದೆ.

ದೊಡ್ಡ ಮಟ್ಟದ ವಸ್ತುಗಳಿಗೆ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಪಕ್ಕದ ಮನೆಯ ವಿಶ್ವನಾಥ ಶೆಟ್ಟಿ ಯವರು ಬಂದು ಮನೆಯಲ್ಲಿದ್ದವರನ್ನು ಕರೆದು ಹೊರಗೆ ಬರಲು ಸಹಕರಿಸಿದರು.

ನೀರಿನ ಮಟ್ಟ ಇಳಿಕೆಯಾದ ನಂತರ ಮನೆಯ ಒಳಗೆ ಸ್ವಚ್ಚ ಮಾಡುವ ಕಾರ್ಯದಲ್ಲಿ ಸ್ಥಳೀಯ ಯುವಕರು ಮಹಿಳೆಯರು ಸಹಕರಿಸಿದರು.

ಪಂಚಾಯತ್ ಸದಸ್ಯ ಮುತ್ತಪ್ಪ ಪೂಜಾರಿ ಮೊರಂಗಲ್ಲು ಜತೆಯಲ್ಲಿದ್ದರು. ಸ್ಥಳಕ್ಕೆ ಪಂಚಾಯತ್ ಸದಸ್ಯರು, ಗ್ರಾಮ ಲೆಕ್ಕಾಧಿಕಾರಿ ಕಚೇರಿ ಸಿಬ್ಬಂದಿ ರಾಮಚಂದ್ರ ರವರು ಆಗಮಿಸಿದರು.

LEAVE A REPLY

Please enter your comment!
Please enter your name here