ಸುಳ್ಯ ನಗರದಲ್ಲಿ ನೀರು ಸರಬರಾಜಿನ ವ್ಯತ್ಯಯದ ಬಗ್ಗೆ ಪಂಚಾಯತ್ ಅದ್ಯಕ್ಷ ರಿಂದ ನಾಗರಿಕರಲ್ಲಿ ವಿನಂತಿ

0

 

ಸುಳ್ಯ ನಗರದ ಕುಡಿಯುವ ನೀರಿನ ಸರಬರಾಜಿನಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಯ ಆಗುವ ಸಾಧ್ಯತೆ ಇದೆ. ಪಯಸ್ವಿನಿ ನದಿಯ ನೀರು ಉಕ್ಕಿ ಹರಿದ ಪರಿಣಾಮ ಕಲ್ಲುಮುಟ್ಲು ಪಂಪ್ ಹೌಸ್ ಬಳಿಯ ಜನರೇಟರ್ ಕೊಠಡಿ ಜಲಾವೃತಗೊಂಡ ಕಾರಣದಿಂದ ವಿದ್ಯುತ್ ಸಮಸ್ಯೆ ಉಂಟಾದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಬಹುದು. ಅಲ್ಲದೆ ನದಿಯ ನೀರು ಮಣ್ಣು ಮಿಶ್ರಿತಗೊಂಡು ಕೆಂಪು ಬಣ್ಣದ ನೀರು ಹರಿಯುತ್ತಿದೆ. ಇದರಿಂದಾಗಿ ಸಂಪೂರ್ಣ ಶುದ್ಧೀಕೃತ ನೀರು ಸಿಗಲು ಸಾಧ್ಯವಿಲ್ಲ. ಆದಷ್ಟು ಮಳೆಕೊಯ್ಲು ವಿನ ಮೂಲಕ ಮಳೆಯ ನೀರನ್ನು ಸಂಗ್ರಹಿಸಿ ಉಪಯೋಗಿಸುವುದು ಉತ್ತಮ ಎಂದು ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ರವರು ಸುದ್ದಿಯ ಮೂಲಕ ನಾಗರಿಕರಿಗೆ ವಿನಂತಿಸಿರುತ್ತಾರೆ.