ಭಾರತೀಯ ತೀಯ ಸಮಾಜದ ಅಜ್ಜಾವರ ಮತ್ತು ಮಂಡೆಕೋಲು ಗ್ರಾಮ ಸಮಿತಿಯ ಪುನರ್ ರಚನೆ

0

 

ಭಾರತೀಯ ತೀಯ ಸಮಾಜದ ಅಜ್ಜಾವರ ಮತ್ತು ಮಂಡೆಕೋಲು ಗ್ರಾಮ ಸಮಿತಿಯ ಪುನರ್ ರಚನೆಯು ಸುಳ್ಯ ವಲಯ ಸಮಿತಿ ಅಧ್ಯಕ್ಷ ರ ನೇತೃತ್ವದಲ್ಲಿ ಜು.31 ರಂದು ಇರಂತಮಜಲು ಕೃಷ್ಣ ರವರ ಮನೆಯಲ್ಲಿ ನಡೆಯಿತು .
ಗ್ರಾಮ ಸಮಿತಿ ಅಧ್ಯಕ್ಷ ಕೃಷ್ಣ ಇರಂತಮಜಲು ಅಧ್ಯಕ್ಸತೆ ವಹಿಸಿದ್ದರು .
ನೂತನ ಸಮಿತಿಯ ಪದಾಧಿಕಾರಿಗಳಾಗಿ ಅಧ್ಯಕ್ಷ ರಾಧಾಕೃಷ್ಣ ಕಾಂತಮಂಗಲ , ಉಪಾಧ್ಯಕ್ಷೆ ಶ್ರೀಮತಿ ಸತ್ಯವತಿ ಬಸವನಪಾದೆ , ಅನಿಲ್ ಕುಮಾರ್ ತೋಟಪಾಡಿ , ಕಾರ್ಯದರ್ಶಿ ಶ್ರೀಮತಿ ಸುಮಿತಾ ಮಂಡೆಕೋಲು, ಜತೆ ಕಾರ್ಯದರ್ಶಿ ಗೋಪಾಲ ಇರಂತಮಜಲು , ನಿಖಿಲ್ ಮಂಡೆಕೋಲು, ಕೋಶಾಧಿಕಾರಿ ಗಣೇಶ್ ಬೊಳುಗಲ್ಲು. ಸದಸ್ಯರಾಗಿ ಕುಮಾರನ್ ಮಾವಂಜಿ , ಕೃಷ್ಣ ಇರಂತಮಜಲು , ಯತಿರಾಜ್ ಮಂಡೆಕೋಲು, ಪ್ರಭಾಕರ ಪಲ್ಲತಡ್ಕ , ನಳಿನಿನಾರಾಯಣ , ಸುಗಂಧಿ ಬೃಜೇಶ್ ಮಂಡೆಕೋಲು‌ ರವರನ್ನು ಆಯ್ಕೆ ಮಾಡಲಾಯಿತು.
ಸುಳ್ಯ ವಲಯ ಸಮಿತಿ ಅಧ್ಯಕ್ಷ ಪವಿತ್ರನ್ ಗುಂಡ್ಯ ನೂತನ ಸಮಿತಿಗೆ ಅಧಿಕಾರ ಹಸ್ತಾಂತರಿಸಿದರು. ವೇದಿಕೆಯಲ್ಲಿ ವಲಯಸಮಿತಿ ಕೋಶಾಧಿಕಾರಿ ಸುನಿಲ್ ಕುಮಾರ್ ಪರಿವಾರಕಾನ , ಜತೆ ಕಾರ್ಯದರ್ಶಿ ಪುರುಷೋತ್ತಮ ನಾವೂರು , ಅಜ್ಜಾವರ ಗ್ರಾಮಪಂಚಾಯತ್ ಅಧ್ಯಕ್ಷೆ ಸತ್ಯವತಿ , ಮಂಡೆಕೋಲು ,ಗ್ರಾಮಪಂಚಾಯತ್ ಉಪಾಧ್ಯಕ್ಸ ಅನಿಲ್ ಕುಮಾರ್ ಉಪಸ್ಥಿತರಿದ್ದರು . ಶ್ರೀಮತಿ ಹೇಮಾವತಿ ಇರಂತಮಜಲು , ವಿಶಾಖ್ ಇರಂತಮಜಲು , ಸ್ವಸ್ಥಿಕ್ ಇರಂತಮಜಲು ಪಾಲ್ಗೊಂಡಿದ್ದರು.
ಪುರುಷೋತ್ತಮ ನಾವೂರು ಸ್ವಾಗತಿಸಿ , ನಿಖಿಲ್ ಮಂಡೆಕೋಲು ವಂದಿಸಿದರು .