ಅನ್ಸಾರಿಯ ಎಜುಕೇಶನ್ ಸೆಂಟರ್ ನಲ್ಲಿ ಗಲ್ಪ್ ಮೀಟ್

0

 

ವಿದೇಶದಲ್ಲಿರುವ ಅನ್ಸಾರಿಯ ಪ್ರತಿನಿಧಿಗಳೊಂದಿಗೆ ಅನ್ಸಾರಿಯ ವಿದ್ಯಾರ್ಥಿಗಳ ಸ್ನೇಹ ಮಿಲನ

ಸುಳ್ಯದಲ್ಲಿ ಶಿಕ್ಷಣ ಕ್ರಾಂತಿಯ ಮೂಲಕ ಅನಾಥ ನಿರ್ಗತಿಕ ಮಕ್ಕಳ ಪಾಲಿನ ಆಶಾಕೇಂದ್ರವಾದ ಸುಳ್ಯ ಅನ್ಸಾರಿಯಾ ಎಜುಕೇಶನ್ ಸೆಂಟರ್ ಇದರ ಅನಿವಾಸಿ ಭಾರತೀಯರ ಸಂಗಮ “ಗಲ್ಫ್ ಮೀಟ್ ಕಾರ್ಯಕ್ರಮ ಅ.1 ರಂದು ಅನ್ಸಾರಿಯಾ ಸಭಾಂಗಣದಲ್ಲಿ ನಡೆಯಿತು.
ಸಂಸ್ಥೆಯ ಅಧ್ಯಕ್ಷರಾದ ಹಾಜಿ ಕೆ. ಎಂ ಅಬ್ದುಲ್ ಮಜೀದ್ ಜನತಾ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಅನ್ಸಾರಿಯಾ ದಅವಾ ಕಾಲೇಜು ಪ್ರಾಂಶುಪಾಲರಾದ ಅಬೂಬಕರ್ ಹಿಮಮಿ ಸಖಾಫಿ ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಮಹಿಳಾ ಶರೀಅತ್ ಕಾಲೇಜು ಪ್ರಾಂಶುಪಾಲರಾದ ಸಯ್ಯದ್ ಹುಸೈನ್ ಸಅದಿ ತಂಙಳ್ ರವರು ದುಅ ಮೂಲಕ ಚಾಲನೆ ನೀಡಿದರು. ಸಂಸ್ಥೆಯ G.C.C ಸೆಂಟ್ರಲ್ ಸಮಿತಿ ಅಧ್ಯಕ್ಷರಾದ ಶಮ್ಸ್ ಸಿ. ಪಿ, ಪ್ರ. ಕಾರ್ಯದರ್ಶಿ ಸಲೀಂ ಇಸ್ಮಾಯಿಲ್, ಕೋಶಾಧಿಕಾರಿ ಹಾಜಿ ಎಸ್ ಎಂ ಅಬ್ದುಲ್ ಹಮೀದ್, ಗಲ್ಫ್ ಪ್ರತಿನಿಧಿಗಳಾಗಿ ರಫೀಕ್ ಕದಿಕಡ್ಕ, ಎಸ್ ಎಂ ಅಬ್ದುಲ್ ರಹಿಮಾನ್, ಸಿದ್ದೀಕ್ ಮಾಂಬ್ಳಿ, ಶಾಹುಲ್ ಹಮೀದ್ ಭಾಗವಹಿಸಿದರು.
ಎಸ್ ಎಂ ಉಮರ್ ಸಂಸ್ಥೆಗಾಗಿ ವಿದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಅನಿವಾಸಿಗಳ ಪರಿಶ್ರಮದ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಹರ್ಲಡ್ಕ, ಉಪಾಧ್ಯಕ್ಷರಾದ ಅಬ್ದುಲ್ ಕಲಾಂ ಕಟ್ಟೆಕ್ಕಾರ್ಸ್,ಕಾರ್ಯದರ್ಶಿ ಶಾಫಿ ಕುತ್ತಮೊಟ್ಟೆ, ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷರಾದ ಹಾಜಿ ಅಬ್ದುಲ್ ಶುಕೂರ್, ಸಂಸ್ಥೆಯ ನಿರ್ದೇಶಕರುಗಳಾದ ಅಬ್ದುಲ್ ಖಾದರ್ ಹಾಜಿ ಪಟೇಲ್, ಎಂ.ಕೆ.ಮುಹಮ್ಮದ್ ಶರೀಫ್, ಹಾಜಿ ಅಬ್ದುಲ್ ಹಮೀದ್ ಜನತಾ, ಎನ್. ಎ ಅಬ್ದುಲ್ ಖಾದರ್, ಎಸ್. ಪಿ ಅಬ್ದುಲ್ ಹಮೀದ್,ದಅವಾ ಪ್ರಾಧ್ಯಾಪಕರಾದ ಹಂಝ ಮುಈನಿ ಸಖಾಫಿ,ಹಾಫಿಲ್ ಅಬ್ದುಲ್ ಮಜೀದ್ ಸಖಾಫಿ ಮತ್ತು ಹಿತೈಷಿಗಳು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯದರ್ಶಿ ಮುಹಮ್ಮದ್ ಕಮಾಲ್ ಎ.ಬಿ.ಮಾಂಬ್ಲಿ ಸ್ವಾಗತಿಸಿ,ಅಬ್ದುಲ್ಲಾ ಹಿಮಮಿ ಸಖಾಫಿ ನಿರೂಸಿದರು. ಅನ್ಸಾರಿಯ ವ್ಯವಸ್ಥಾಪಕ ಮುಹಮ್ಮದ್ ಉವೈಸ್ ಬೀಟಿಗೆ ವಂದಿಸಿದರು.