ಆ.4: ಕನಕಮಜಲು ಗ್ರಾ.ಪಂ.ನಲ್ಲಿ ನಾಯಿಗಳಿಗೆ ಉಚಿತ ರೇಬಿಸ್ ನಿರೋಧಕ ಲಸಿಕಾ ಶಿಬಿರ

0

ದಕ್ಷಿಣ ಕನ್ನಡ ಜಿಲ್ಲಾ ಪ್ರಾಣಿದಯಾ ಸಂಘ, ಸುಳ್ಯ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕನಕಮಜಲು ಗ್ರಾಮ ಪಂಚಾಯತಿ, ಕನಕಮಜಲು ಯುವಕ ಮಂಡಲದ ಸಹಯೋಗದಲ್ಲಿ ನಾಯಿಗಳಿಗೆ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರವು ಆ.4ರಂದು ಜರುಗಲಿದೆ.
ಬೆಳಿಗ್ಗೆಯಿಂದ ಕನಕಮಜಲು ಗ್ರಾಮದ ಗ್ರಾ.ಪಂ. ಬಳಿ, ನೆಡಿಲು ಸಾರ್ವಜನಿಕ ಬಾವಿ ಬಳಿ, ಮಾಣಿಮಜಲು ಬಾವಿ ಬಳಿ, ಸುಣ್ಣಮೂಲೆ ವಿಷ್ಣುಮೂರ್ತಿ ದ್ವಾರದ ಬಳಿ, ಕಾರಿಂಜ ಅಂಗನವಾಡಿ ಬಳಿ ಹಾಗೂ ಪಂಜಿಗುಂಡಿ ಕಾಲನಿಯ ಬಳಿಯಲ್ಲಿ ಉಚಿತ ಲಸಿಕಾ ಶಿಬಿರವು ಜರುಗಲಿದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಧರ ಕುತ್ಯಾಳ ಅವರು ತಿಳಿಸಿದ್ದಾರೆ.