ಚೆಂಬು : ದಬ್ಬಡ್ಕದಲ್ಲಿ ಜಲಸ್ಫೋಟ

0

 

 

ಮನೆ ಹಾಗೂ ಕೊಟ್ಟಿಗೆಗೆ ಹಾನಿ

ಚೆಂಬು ಗ್ರಾಮದ ದಬ್ಬಡ್ಕದ ಕೊಪ್ಪ ಎಂಬಲ್ಲಿ ಭವನಿಶಂಕರ್ ಅವರ ಮನೆ ಬಳಿ ಜಲಸ್ಫೋಟಗೊಂಡು ಅವರ ಮನೆಯ ಕೆಳಭಾಗದಲ್ಲಿರುವ ಬಾಲಕೃಷ್ಣ ಕೊಪ್ಪ ಎಂಬವರ ಮನೆಬಳಿ ಮಣ್ಣು ಮತ್ತು ನೀರು ಹರಿದು ಬಂದು ಕೊಟ್ಟಿಗೆಗೆ ಮತ್ತು ಹಟ್ಟಿಗೆ ಅಪಾರ ಹಾನಿಯಾಗಿದ್ದು ಮನೆಗೂ ಹಾನಿಯಾಗಿದೆ.

 

ಸ್ಥಳಕ್ಕೆ ಮಡಿಕೇರಿ ತಹಶೀಲ್ದಾರ್ ಮತ್ತು ಸಿಬ್ಬಂದಿ ವರ್ಗ ಕೊಯನಾಡು ರೇಂಜರ್ ಮಧುಸೂದನ್ ಮತ್ತು ಸಿಬ್ಬಂದಿ ವರ್ಗ ಮಡಿಕೇರಿ ಎನ್. ಡಿ. ಆರ್. ಎಫ್ ತಂಡ ಚೆಂಬು ಗ್ರಾ. ಪಂ. ಅಧ್ಯಕ್ಷೆ ಕುಸುಮ, ಗ್ರಾಮ ವಿ. ಎ. ರೇಷ್ಮಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮನೆಗಳಿಗೆ ಹಾನಿಯಾಗದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಊರಿನ ಸ್ಥಳೀಯರು ಸೇರಿಕೊಂಡು ಮರಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ಕೈಜೋಡಿಸಿದರು.

ಎನ್. ಡಿ. ಆರ್. ಎಫ್ ತಂಡವು ಆಗಮಿಸಿ ಸಹಕರಿಸಿದರು. ಅಲ್ಲದೆ ಕಾಂತುಬೈಲು ಬಳಿ ಸೇತುವೆ ಕೊಚ್ಚಿಹೋಗಿ ಸಂಪರ್ಕ ಕಡಿತಗೊಂಡಿದೆ.