ಕಲ್ಲುಗುಂಡಿ ನೆರೆಹಾನಿ ಮನೆಗಳಿಗೆ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರ ಭೇಟಿ, ಪರಿಹಾರ ವಿತರಣೆ

0
1316

ಭೀಕರ ಮಳೆಯಿಂದ ನೆರೆ ಹಾನಿಗೊಳಗಾದ ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳ ಮನೆಗೆ; ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸುಳ್ಯ ಇದರ ಪ್ರಧಾನ ಕಾರ್ಯದರ್ಶಿಗಳಾದ ಡಾ. ರೇಣುಕಾ ಪ್ರಸಾದ್ ಕೆ.ವಿ ತನ್ನ ಸಿಬ್ಬಂದಿಗಳೊಂದಿಗೆ ಭೇಟಿ ನೀಡಿ ತುರ್ತು ಪರಿಹಾರವಾಗಿ ತಲಾ ೧೦,೦೦೧ ರೂ.ಗಳನ್ನು ನೀಡಿ ಸಾಂತ್ವನ ಹೇಳಿದರು. ಕಲ್ಲುಗುಂಡಿ, ಸಂಪಾಜೆ ಭಾಗದಲ್ಲಿ ಆಗೋಸ್ಟ್ ೨ರಂದು ಸುರಿದ ಬೀಕರ ಮಳೆಯಿಂದಾಗಿ ಕೆ.ವಿ.ಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜು ಮತ್ತು ಕೆ.ವಿ.ಜಿ ಐ.ಪಿ.ಎಸ್ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳಾದ ಅನುಸೂಯ ಮತ್ತು ಜ್ಯೋತಿಯವರ ಮನೆಗೆ ಭೇಟಿ ನೀಡಿದರು. ನೆರೆಯಿಂದ ಭಾಗಶಃ ಹಾನಿಗೊಳಗಾದ ಮನೆಯ ಪರಿಸ್ಥಿತಿಯನ್ನು ವೀಕ್ಷಣೆ ಮಾಡಿ ಡಾ. ರೇಣುಕಾ ಪ್ರಸಾದ್ ಅವರು ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮತ್ತು ಸಲಹೆಗಾರರಾದ ಡಾ. ಉಜ್ವಲ್ ಊರುಬೈಲು, ಕೆ.ವಿ.ಜಿ ಐ.ಪಿ.ಎಸ್ ಪ್ರಾಂಶುಪಾಲರಾದ ಅರುಣ ಕುಮಾರ್, ಕೆ.ವಿ.ಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ದೀಪಕ್ ವೈ.ಕೆ, ಕೆ.ವಿ.ಜಿ ದಂತ ಮಹಾವಿದ್ಯಾಲಯದ ಆಡಳಿತಾಧಿಕಾರಿ ಮಾಧವ ಬಿ.ಟಿ, ಕೆ.ವಿ.ಜಿ ಪಾಲಿಟ್ನೆಕ್ ಕಛೇರಿ ಅಧೀಕ್ಷಕರಾದ ಶಿವರಾಮ ಕೇರ್ಪಳ, ಎ.ಓ.ಎಲ್.ಇ ಆಡಳಿತಾಧಿಕಾರಿ ಪ್ರಸನ್ನ ಕಲ್ಲಾಜೆ, ರಾಜ್ಯ ಉಪಾಧ್ಯಕ್ಷರ ಆಪ್ತ ಕಾರ್ಯದರ್ಶಿ ಭವಾನಿಶಂಕರ ಅಡ್ತಲೆ, ಪಾಲಿಟೆಕ್ನಿಕ್ ಸಿಬ್ಬಂದಿಗಳಾದ ಅರುಣ್ ಕುರುಂಜಿ, ಕಮಲಾಕ್ಷ ನಂಗಾರು, ಕೆ.ವಿ.ಜಿ ಐ.ಪಿ.ಎಸ್ ಸಿಬ್ಬಂದಿಗಳಾದ ಸುಜಿತ್ ಮತ್ತು ಮಂಜುನಾಥ ಮುತ್ಲಾಜೆ ಹಾಜರಿದ್ದರು.

p>

LEAVE A REPLY

Please enter your comment!
Please enter your name here