ಸಂಪಾಜೆ : ಭಾರೀ ಮಳೆಗೆ ಮನೆಯ ಗೋಡೆ ಬಿರುಕು

0

 

ಮನೆ ಸಾಮಾಗ್ರಿಗಳ ಸ್ಥಳಾಂತರ

ಭಾರೀ ಮಳೆಗೆ ಮನೆಯ ಗೋಡೆ ಬಿರುಕು ಬಿಟ್ಟಿದ್ದು, ಮನೆಯಲ್ಲಿದ್ದ ಸಾಮಾಗ್ರಿಗಳನ್ನು ಸ್ಥಳಾಂತರ ಮಾಡಲಾಗಿದೆ.

ಸಂಪಾಜೆ ಗ್ರಾಮದ ಜನಾರ್ಧನ ಶೇಷಮ್ಮರವರ ಮನೆಯ ಒಳಗಿನ ಗೋಡೆ ಬಿರುಕು ಬಿಟ್ಟಿದೆ. ಹಾಗೂ ಮನೆಯ ಸುತ್ತಮುತ್ತ ನೀರು ತುಂಬಿ ಕೇಸರುಮಯವಾಗಿದ್ದು, ಮನೆ ಅಪಾಯದ ಸ್ಥಿತಿಯಲ್ಲಿದೆ. ಮನೆಯಲ್ಲಿರುವ ಸಾಮಾಗ್ರಿಗಳನ್ನು ಸ್ಥಳಾಂತರ ಮಾಡಲಾಯಿತು.