ಕಲ್ಲುಗುಂಡಿಯಲ್ಲಿ ಮತ್ತೆ ಪ್ರಾರಂಭಗೊಂಡ ಮಳೆ

0

 

ಕೂಲಿಶೆಡ್ ಬಳಿ ರಸ್ತೆಯಲ್ಲಿ ತುಂಬಿ ಹರಿಯುತ್ತಿರುವ ಮಳೆನೀರು

 

ಕಲ್ಲುಗುಂಡಿಯಲ್ಲಿ ಮತ್ತೆ ಮಳೆ ಜೋರಾಗಿ ಸುರಿಯಲಾರಂಭಿಸಿದ್ದು, ಕೂಲಿಶೆಡ್ ಬಳಿ ಮುಖ್ಯರಸ್ತೆಯಲ್ಲೇ ಮಳೆನೀರು ತುಂಬಿ ಹರಿಯುತ್ತಿದೆ.


ಜೋರಾದ ಮಳೆಯ ಹಿನ್ನೆಲೆಯಲ್ಲಿ ಕೂಲಿಶೆಡ್ ಸಮೀಪದಲ್ಲಿರುವ ತೋಡಿನಲ್ಲಿ ನೀರಿನ ಮಟ್ಟ ಮತ್ತೆ ಹೆಚ್ಚಳವಾಗಿದ್ದು, ಅಕ್ಕಪಕ್ಕದ ಅಂಗಡಿ ಹಾಗೂ ಮನೆಯ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ.
ಕೂಲಿಶೆಡ್ ಬಳಿ ಸ್ಥಳೀಯ ಅಂಗಡಿಗಳಿಗೂ ನೀರು ನುಗ್ಗಿದ್ದು , ಕಲ್ಲುಗುಂಡಿ ಪೇಟೆ ಮುಳುಗುತ್ತಿದೆ, ಆದರೆ ಯಾವುದೇ ಅಧಿಕಾರಿಗಳು ಸ್ಪಂದನೆ ನೀಡುತ್ತಿಲ್ಲ. ನಮಗೆ ಕೆಲವು ಸಂಘಸಂಸ್ಥೆಗಳ ಮತ್ತು ಊರವರ ಸಹಕಾರ ಮಾತ್ರ ಇದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಜಿ. ಕೆ. ಹಮೀದ್ ತಿಳಿಸಿದ್ದಾರೆ.