ಮಳೆ ಹಿನ್ನಲೆ : ಶಾಲಾ ಮುಖ್ಯ ಶಿಕ್ಷಕರಿಗೆ ಶಿಕ್ಷಣ ಇಲಾಖೆ ನೀಡಿರುವ ಸೂಚನೆಗಳೇನು?

0

 

ಇಲ್ಲಿದೆ ಸಂಪೂರ್ಣ ವಿವರ

ತಾಲೂಕಿನ ಕೆಲವು ಪ್ರದೇಶಗಳಲ್ಲಿ ವಿಪರೀತ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ತಾಲೂಕಿನ ಎಲ್ಲ ಶಾಲಾ ಮುಖ್ಯ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಕೆಲವು ಸೂಚನೆಗಳು ನೀಡಿದೆ.

ಈ ದಿನ ಸುಳ್ಯದಲ್ಲಿ ನಡೆದ ವಿಪತ್ತು ನಿರ್ವಹಣಾ ಸಭೆಯಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳು ನೀಡಿದ ಸೂಚನೆಯಂತೆ
✅ ಮಳೆ‌ ಹಿನ್ನೆಲೆಯಲ್ಲಿ ಯಾವುದಾದರೂ ಶಾಲೆಗೆ ತುರ್ತಾಗಿ ರಜೆ ನೀಡಲೇಬೇಕಾದ ಪರಿಸ್ಥಿತಿ ಇದ್ದಲ್ಲಿ ತಕ್ಷಣ ಸಮೂಹ ಸಂಪನ್ಮೂಲ ವ್ಯಕ್ತಿಗಳ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಿ ಸ್ಥಳೀಯವಾಗಿ ರಜೆ ನೀಡುವುದು.
✅ ಶಾಲೆಯ ಕೆಲವು ವಿದ್ಯಾರ್ಥಿಗಳಿಗೆ ಮಾತ್ರ ಮಳೆಯ ಕಾರಣ ಬರಲು ಸಮಸ್ಯೆ ಇದ್ದಲ್ಲಿ ಅಂತಹ ಮಕ್ಕಳನ್ನು ಪ್ರಥಮ ಆದ್ಯತೆಯಲ್ಲಿ ಸಂಪರ್ಕಿಸಿ ಆ ಮಕ್ಕಳು ಶಾಲೆಗೆ ಬರದಂತೆ ಸೂಚನೆ ನೀಡುವುದು.
✅ ಶಾಲೆಯಲ್ಲಿ ಶಿಥಿಲಗೊಂಡ ಕಟ್ಟಡಗಳು / ಅಕ್ಷರ ದಾಸೋಹ ಕೊಠಡಿಗಳು ಇದ್ದಲ್ಲಿ ಅಂತಹ ಕೊಠಡಿಯಲ್ಲಿ ತರಗತಿ ನಡೆಸುವಂತಿಲ್ಲ. ಬದಲಿ ವ್ಯವಸ್ಥೆ ಮಾಡಿಕೊಳ್ಳುವುದು.
✅ ಶಾಲೆಗಳ ಸಮೀಪ ಮನೆಗಳಿಗೆ‌ ನೀರು ನುಗ್ಗಿ ಶಾಲೆಯಲ್ಲಿ ಆಶ್ರಯಕ್ಕಾಗಿ ಕೋರಿಕೆ ಬಂದಲ್ಲಿ ತಕ್ಷಣ ಮುಖ್ಯ ಶಿಕ್ಷಕರು ಸೂಕ್ತ ಕ್ರಮವಹಿಸುವುದು ಎಂದು ಶಿಕ್ಷಣ ಇಲಾಖೆ ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ.