ಕಡಿಮೆಯಾಗದ ಮಳೆ : ನಾಳೆಯೂ ಸುಳ್ಯ ತಾಲೂಕಿನ (ಆ.4) ಶಾಲೆಗಳಿಗೆ ರಜೆ ಘೋಷಣೆ

0

 

ಭಾರೀ ಮಳೆಯ ಕಾರಣದಿಂದ ನಾಳೆಯೂ ಸುಳ್ಯ ತಾಲೂಕಿನ ಶಾಲಾ ಕಾಲೇಜುಗಳಿಗೆ (ಆ.4) ರಜೆ ಘೋಷಣೆ ಮಾಡಲಾಗಿದೆ.

ಸಂಜೆಯ ವೇಳೆಗೆ ಅತೀ ಹೆಚ್ಚು‌ಮಳೆ ಬೀಳುವ ಪ್ರದೇಶಗಳಿಗೆ ಮಾತ್ರ ರಜೆ ಎಂದು ಸೂಚನೆ ನೀಡಲಾಗಿತ್ತು
‌ಅದರಂತೆ
ಸುಳ್ಯ ಬ್ಲಾಕ್ ನ ಹರಿಹರ ಕ್ಲಸ್ಟರ್ ಎಲ್ಲಾ ಶಾಲೆಗಳಿಗೆ ರಜೆ. ಗುತ್ತಿಗಾರು‌ ಗ್ರಾಮದ ಮೆಟ್ಟಿನಡ್ಕ ಶಾಲೆ ಹಾಗೂ ಅರಂಬೂರಿನ ಇಡ್ಯಡ್ಕ ಶಾಲೆಗೆ ರಜೆ ಎಂದು ಹೇಳಲಾಗಿತ್ತು. ಇದೀಗ ತಾಲೂಕಿನ ಎಲ್ಲ ಕಡೆಯೂ ಮಳೆಯಾಗುತ್ತಿರುವುದರಿಂದ ನಾಳೆ (ಆ.4) ರಂದು ರಜೆ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ  ತಿಳಿಸಿದ್ದಾರೆ.