ಶಿವಮೊಗ್ಗ ಶ್ರೀ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿದ ಸುಳ್ಯದ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಮುಖಂಡರು

0

ಮಠದ ಮುಖ್ಯಸ್ಥರಿಂದ ಮುಖಂಡರಿಗೆ ಸನ್ಮಾನ

ಶಿವಮೊಗ್ಗ ಶ್ರೀ ಆದಿಚುಂಚನಗಿರಿ ಶಾಖಾ ಮಠಕ್ಕೆ ಸುಳ್ಯ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಕೆ ಎಂ ಮುಸ್ತಫಾ ಜನತಾ , ಸುಳ್ಯ ನ ಪಂ ಮಾಜಿ ಅಧ್ಯಕ್ಷ ಎಸ್ ಸಂಸುದ್ದಿನ್ ಅರಂಬೂರು, ಸುಳ್ಯ ವಾಲಿಬಾಲ್ ಅಸೋಸಿಯೇಷನ್ ಕೋಶಾಧಿಕಾರಿ ಕೆ ಬಿ ಇಬ್ರಾಹಿಂ, ಯುವ ಉದ್ಯಮಿ ಬಷೀರ್ ಸಪ್ನಾ ರವರು ಆಗಸ್ಟ್ 3 ರಂದು ಸೌಹಾರ್ದ ಭೇಟಿ ನೀಡಿದರು.


 ದಾವಣಗೆರೆಯಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ಹುಟ್ಟು ಹಬ್ಬದ ಅಂಗವಾಗಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ತೆರಳಿದ ಸಂದರ್ಭ ಮಠಕ್ಕೆ ಭೇಟಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಮಠದ ಟ್ರಸ್ಟಿ ಸತೀಶ್ ರವರು ಮುಖಂಡರನ್ನು ಸ್ವಾಗತಿಸಿ ಬರಮಾಡಿಕೊಂಡರು.


ಈ ಸಂದರ್ಭದಲ್ಲಿ ಮಠದ ಶಿಕ್ಷಣ ಸಂಸ್ಥೆಗಳನ್ನು, ಡಿಜಿಟಲ್ ಲೈಬ್ರರಿ, ಮತ್ತು ಕಾರ್ಯ ಚಟುವಟಿಕೆಗಳ ಬಗ್ಗೆ ಸಂದರ್ಶನ ನಡೆಸಿದ ಮುಖಂಡರು ಮಠದ ಬಗ್ಗೆ, ಮತ್ತು ಆಡಳಿತ ಸಮಿತಿಯವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಮಠದ ವತಿಯಿಂದ ಮುಖಂಡರುಗಳಿಗೆ ಶಾಲು ಹೊದಿಸಿ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಖಾ ಮಠದ ಟ್ರಸ್ಟಿ ಟಿ ದಾಸಪ್ಪ ಗೌಡ, ಪ್ರಧಾನ ಅರ್ಚಕರಾದ ಶ್ರೀನಾಥ್ ಭಟ್, ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಹೇಮಾ , ಮಠದ ಇಂಜಿನಿಯರ್ ಬಸವರಾಜ್, ಸಹಾಯಕರುಗಳಾದ ಸತೀಶ್ ಮೊದಲಾದವರು ಉಪಸ್ಥಿತರಿದ್ದರು.