ಸುಳ್ಯದಲ್ಲಿ ವಿಕಲಚೇತನರ ಮೇಲ್ವಿಚಾರಕರ ಪ್ರಗತಿ ಪರಿಶೀಲನಾ ಸಭೆ ಮತ್ತು ಜಿಲ್ಲಾ ಒಕ್ಕೂಟದ ಸಭೆ

0

ಸುಳ್ಯ ತಾಲ್ಲೂಕು ಪಂಚಾಯತ್ ನಲ್ಲಿ ವಿಕಲಚೇತನರ ಇಲಾಖೆಯ ತಾಲ್ಲೂಕಿನ ವಿಕಲ ಚೇತನರ ಮೇಲ್ವಿಚಾರಕರಾದ ಎಂ.ಅರ್. ಡಬ್ಲ್ಯೂ, ಯು.ಅರ್ ಡಬ್ಲ್ಯೂ ಮತ್ತು ವಿ.ಅರ್. ಡಬ್ಲ್ಯೂ ರವರ ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಗೋಪಾಲಕೃಷ್ಣ ಅವರ ಅಧ್ಯಕ್ಷ ತೆಯಲ್ಲಿ ಆ. 3ರಂದು ನಡೆಯಿತು.

ಜಿಲ್ಲಾ ಕಾರ್ಡಿನೆಟರ್ ಸುಪ್ರಿತಾ, ಮತ್ತು ಎಂ.ಅರ್.ಡಬ್ಲ್ಯೂ ಎಲ್ಲಾ ವಿ.ಅರ್.ಡಬ್ಲ್ಯೂ ರವರು ಹಾಜರಿದ್ದರು. ಚಂದ್ರಶೇಖರ್ ಸ್ವಾಗತಿಸಿ, ಪ್ರವೀಣ್ ನಾಯಕ್ ವಂದಿಸಿದರು. ನಂತರ ತಾಲ್ಲೂಕು ಪಂಚಾಯತ್ ನಲ್ಲಿ ವಿಕಲ ಚೇತನರ ಕಾರ್ಯಕರ್ತರ ಜಿಲ್ಲಾ ಒಕ್ಕೂಟದ ಸಭೆ ನಡೆಯಿತು.

ಜಿಲ್ಲಾಧ್ಯಕ್ಷ ಜಾನ್ ಬ್ಯಾಪಿಸ್ಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ನಾಯಕ್, ಜಿಲ್ಲಾ ಖಜಾಂಜಿಗಳಾದ ಜೋಸೆಫ್, ಜಿಲ್ಲಾ ಉಪ ಖಜಾಂಜಿ ಚಂದ್ರಶೇಖರ್, ಪುಟ್ಟಣ್ಣ ವಿ, ಮತ್ತು ತಾಲ್ಲೂಕಿನ ಎಲ್ಲಾ ಕಾರ್ಯಕರ್ತರು ಭಾಗವಹಿಸಿದ್ದರು. ತಾಲ್ಲೂಕಿನ ವಿಕಲಚೇತನರ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.