ಗುತ್ತಿಗಾರು ಭಾಗದಲ್ಲಿ ಸುರಿದ ಮಳೆ, ಬಳ್ಳಕ್ಕ ಹಾಲು ಉತ್ಪಾದಕರ ಸಂಘದ ಕಚೇರಿಯ ಒಳಗೆ ನುಗ್ಗಿದ ನೀರು

0

ಗುತ್ತಿಗಾರು ಭಾಗದಲ್ಲಿ  ಆ. 3 ರ ಸಂಜೆ ಸುರಿದ ರಣ ಮಳೆಗೆ ಬಳ್ಳಕ್ಕ ಭಾಗದಲ್ಲಿ ಹರಿಯುವ ಚಿಮಿಕಯ ಎಂಬ ಹೊಳೆ ತುಂಬಿ ಹರಿಯುತ್ತಿದ್ದು, ಬಳ್ಳಕ್ಕದಲ್ಲಿರುವ ಹಾಲು ಉತ್ಪಾದಕರ ಸ.ಸಂಘದ ಕಚೇರಿಗೆ ನೆರೆ ನೀರು ನುಗ್ಗಿರುವುದಾಗಿ ತಿಳಿದುಬಂದಿದೆ.

ಹಾಲು ಸೊಸೈಟಿಯ ಪಕ್ಕದ ಗೋಡೌನ್ ನಲ್ಲಿ ಶೇಖರಿಸಿಟ್ಟಿದ್ದ ಪಡಿತರ ಸಾಮಾಗ್ರಿಗಳನ್ನು ಸ್ಥಳಿಯರ ಸಹಾಯದಿಂದ ಸುದ್ದಿ ಪತ್ರಿಕಾ ಏಜೆಂಟ್ ಪದ್ಮಯ್ಯ ಗೌಡ ಎಂಬವರ ಮನೆಯಲ್ಲಿ ತಂದಿರಿಸಲಾಗಿದೆಯೆಂದು ತಿಳಿದುಬಂದಿದೆ.