ಎಲಿಮಲೆ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿಯಾಗಿ ಶ್ರೀಮತಿ ಸಂಧ್ಯಾ ಕುಮಾರ್

0

ಎಲಿಮಲೆ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರಾಗಿ ಶ್ರೀಮತಿ ಸಂಧ್ಯಾ ಕುಮಾರ್ ಎಂಬುವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

1994ರಲ್ಲಿ ಪ್ರೌಢಶಾಲಾ ಶಿಕ್ಷಕಿಯಾಗಿ ನೇಮಕಗೊಂಡ ಸಂಧ್ಯಾ ಕುಮಾರ್ ರವರು ಎಡಮಂಗಲ ಪ್ರೌಢಶಾಲೆಯಲ್ಲಿ ಆರಂಭಿಕ ಸೇವೆ ಸಲ್ಲಿಸಿದರು. ಬಳಿಕ ಸರಕಾರಿ ಪ್ರೌಢಶಾಲೆ ಆಲೆಟ್ಟಿ, ಸರಕಾರಿ ಪ್ರೌಢಶಾಲೆ ಹರಿಹರ ಪಲ್ಲತಡ್ಕ, ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಹಾಗೂ ದುಗಲಡ್ಕ ಸರಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿದ್ದರು. ಇದೀಗ ಮುಖ್ಯ ಶಿಕ್ಷಕಿಯಾಗಿ ಪದೋನ್ನತಿಗೊಂಡಿದ್ದು ಎಲಿಮಲೆ ಸರಕಾರಿ ಪ್ರೌಢ ಶಾಲೆಗೆ ವರ್ಗಾವಣೆಗೊಂಡಿದ್ದಾರೆ.

ಇವರು ಉಬರಡ್ಕ ಮಿತ್ತೂರು ಗ್ರಾಮದ ಈಶ್ವರಕುಮಾರ್ ಭಟ್ ರವರ ಪತ್ನಿ.
ಇವರ ಪ್ರಥಮ ಪುತ್ರಿ ಶ್ರುತಿ ಮಣಿಪಾಲದಲ್ಲಿ ಮೆತಮೆಟಿಕ್ಸ್ ನಲ್ಲಿ ಪಿ.ಎಚ್.ಡಿ ಮಾಡುತ್ತಿದ್ದು ಪತಿ ಚೇತನಕೃಷ್ಣರೊಂದಿಗೆ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಎರಡನೇ ಪುತ್ರಿ ಪ್ರೀತಿ ಪುತ್ತೂರಿನ ಫಿಲೋಮಿನಾದಲ್ಲಿ ಬಿ.ಎಸ್ಸಿ, ಹಾಗೂ ಇನ್ನೋರ್ವ ಪುತ್ರಿ ಮೈತ್ರಿ ಸುಳ್ಯದ ಎನ್ನೆಂಸಿಯಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.