ಆ. 14 : ಗುತ್ತಿಗಾರಿನಲ್ಲಿ ರಕ್ತದಾನ ಮುಕೇನ ಆಜಾದಿ ಕಾ ಅಮೃತ ಮಹೋತ್ಸವ ಆಚರಣೆ 

0

ರಕ್ತ ದಾನಿಗಳನ್ನು ಸನ್ಮಾನಿಸುವ ಕಾರ್ಯಕ್ರಮ

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು, ಅಮರ ಸೇನಾ ರಕ್ತ ದಾನಿಗಳ ತಂಡ ಗುತ್ತಿಗಾರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ತಾಲೂಕು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದ. ಕ. ಜಿಲ್ಲೆ, ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಿಗಾರು, ಗ್ರಾಮ ಪಂಚಾಯತ್ ಗುತ್ತಿಗಾರು ಇವುಗಳ ಸಹಯೋಗದಲ್ಲಿ ಆ. 14 ರಂದು ರಕ್ತದಾನ ಕಾರ್ಯಕ್ರಮ ಆಯೋಜನೆ ಮತ್ತು ಈ ಸಂದರ್ಭದಲ್ಲಿ ರಕ್ತ ದಾನ ಮಾಡುವವರನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಿ ಸನ್ಮಾನಿಸುವ ಮೂಲಕ ಆಜಾದಿ ಅಮೃತ ಮಹೋತ್ಸವವನ್ನು ಮಾದರಿ ಕಾರ್ಯಕ್ರಮವಾಗಿ ಆಚರಣೆ ಮಾಡಲಾಗುವುದು ಎಂದು ಜಂಟಿ ಸಂಸ್ಥೆಗಳ ಸಂಘಟಕರು ತಿಳಿರುತ್ತಾರೆ.

ರಕ್ತದಾನ ಕಾರ್ಯಕ್ರಮವು ಪ. ಪಂಗಡ ಸಭಾ ಭವನ ಗುತ್ತಿಗಾರು ಇಲ್ಲಿ ನಡೆಯಲಿದೆ. ಮತ್ತು ಟ್ರಸ್ಟ್ ವತಿಯಿಂದ ಆಂಬುಲೆನ್ಸ್ ಖರೀದಿಗೆ ಸಂಗ್ರಹ ಮಾಡಿದ ದೇಣಿಗೆಯ ಖರ್ಚು ವೆಚ್ಚಗಳ ಲೆಕ್ಕಪತ್ರ ವನ್ನು ಸಾರ್ವಜನಿಕರಿಗೆ ತಿಳಿಸಲು ನಿರ್ಧರಿಸಲಾಗಿದೆ. ರಕ್ತದಾನ ಮಾಡಲು ಆಸಕ್ತಿಯುಳ್ಳ ರಕ್ತ ದಾನಿಗಳು ಆ. 9 ರ ಮೊದಲು ಸಂಘಟಕರನ್ನು ಸಂಪರ್ಕಿಸುವಂತೆ ವಿನಂತಿಸಿದ್ದಾರೆ.