ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಆಚರಣೆ

0
135

“ಮಾನವ ಕಳ್ಳ ಸಾಗಾಣಿಕೆಯ ತಡೆ ” ದಿನಾಚರಣೆಯ ಕಾರ್ಯಕ್ರಮವನ್ನು ಜ್ಞಾನದೀಪ ವಿದ್ಯಾಸಂಸ್ಥೆಗಳು ಎಲಿಮಲೆ ಯಲ್ಲಿ ಜು.30ರಂದು ಆಚರಿಸಲಾಯಿತು.
ಶಾಲೆಯ ಸಹಶಿಕ್ಷಕರಾದ ಸಂಪತ್ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ತಮ್ಮ ಉಪನ್ಯಾಸದಲ್ಲಿ ಅವರು ಮಾನವ ಕಳ್ಳ ಸಾಗಾಣಿಕೆಯಿಂದಾಗಿ ಸಮಾಜದಲ್ಲಿ ಉಂಟಾಗುತ್ತಿರುವ ಅಶಾಂತಿ ಮತ್ತು ಮಕ್ಕಳ ಮೇಲೆ ಅದರ ಪ್ರಭಾವ ಹಾಗೂ ಪೋಷಕರು, ಶಾಲೆ ಮತ್ತು ಪ್ರಸ್ತುತ ಇರುವ ಕಾನೂನಿನ ಅರಿವು ಮತ್ತು ಮಾನವ ಕಳ್ಳ ಸಾಗಾಣಿಕೆಯನ್ನು ತಡೆಯಲು ತೆಗೆದುಕೊಳ್ಳಬೇಕಾದ ಕ್ರಮಗಳು ಇತ್ಯಾದಿ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.

p>

ಈ ಕಾರ್ಯಕ್ರಮದ ವೇದಿಕೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಗದಾಧರ್ ಉಪಸ್ಥಿತರಿದ್ದರು. ಅವರೊಂದಿಗೆ ಶಾಲಾ ಸಹಶಿಕ್ಷಕರು ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ” ಮಾನವ ಕಳ್ಳ ಸಾಗಾಣಿಕೆಯ ತಡೆ ” ಕುರಿತ ಪ್ರತಿಜ್ಞಾ ವಿಧಿಯನ್ನು ಮಾಡಿದರು.

LEAVE A REPLY

Please enter your comment!
Please enter your name here