ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಮನೆ ಕಳೆದುಕೊಂಡವರಿಗೆ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ರೇಣುಕಾಪ್ರಸಾದ್ ಕೆ.ವಿ. ಯರಿಂದ ಪರಿಹಾರ ವಿತರಣೆ

0

ಹರಿಹರಪಲ್ಲತ್ತಡ್ಕ ಭಾಗದಲ್ಲಿ ಭೀಕರ ಮಳೆಯಿಂದ ಜಲಸ್ಫೋಟಗೊಂಡು ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಮನೆಯನ್ನು ಕಳೆದುಕೊಂಡ ಕಜ್ಜೋಡಿ ತೇಜಕುಮಾರ್ ಅವರಿಗೆ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ರಿ, ಸುಳ್ಯ ಇದರ ಪ್ರಧಾನ ಕಾರ್ಯದರ್ಶಿಗಳಾದ ಡಾ. ರೇಣುಕಾಪ್ರಸಾದ್ ಕೆ.ವಿಯವರು ರೂ. 10,000/- ನೀಡಿ ಸಾಂತ್ವನ ಹೇಳಿದರು.


ಜುಲೈ 9ರಂದು ಭೀಕರ ಮಳೆಯಿಂದ ಗುಡ್ಡ ಜರಿದು ಹರಿಹರಪಲ್ಲತ್ತಡ್ಕ ಗ್ರಾಮದ ಕಜ್ಜೋಡಿ ತೇಜಕುಮಾರ್‌ರವರ ಗೃಹಪ್ರವೇಶಕ್ಕೆ ತಯಾರಾಗಿದ್ದ ನೂತನ ಮನೆಯು ಸಂಪೂರ್ಣ ಹಾನಿಯಾಗಿದ್ದು, ಇವರ ಸಮಸ್ಯೆಗೆ ಸ್ಪಂದಿಸಿದ ಡಾ. ರೇಣುಕಾ ಪ್ರಸಾದ್ ಕೆ.ವಿಯವರು ತಮ್ಮ ಆಡಳಿತ ಕಛೇರಿಯಲ್ಲಿ ಪರಿಹಾರದ ಮೊತ್ತವನ್ನು ನೀಡಿ ಸಾಂತ್ವನದ ಮಾತುಗಳನ್ನಾಡಿ ನಿಮ್ಮ ಸಹಾಯಕ್ಕೆ ನಾನು ಮತ್ತು ನಮ್ಮ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳು ಸದಾ ಸಿದ್ದರಿದ್ದೇವೆ ಎಂದು ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಉಜ್ವಲ್ ಊರುಬೈಲು, ಕೆ.ವಿ.ಜಿ ಪವರ್ ಹೌಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಸಂತ ಕಿರಿಭಾಗ, ಎ.ಓ.ಎಲ್.ಇ ಕಛೇರಿ ಆಡಳಿತಾಧಿಕಾರಿ ಪ್ರಸನ್ನ ಕಲ್ಲಾಜೆ, ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಪಕರಾದ ಕಿಶೋರ್ ಕುಮಾರ್ ಕಜ್ಜೋಡಿ, ಪ್ರಜ್ವಲ್ ಕಜ್ಜೋಡಿ, ಲ| ರಾಮಚಂದ್ರ ಪಳಂಗಾಯ, ಲ| ಸತೀಶ್ ಕೂಜುಗೋಡು, ಜಯಪ್ರಕಾಶ್ ಕಜ್ಜೋಡಿ ಉಪಸ್ಥಿತರಿದ್ದರು.