ಬಾಲೆಂಬಿ: ಸುದ್ದಿ ಸ್ವಾತಂತ್ರ್ಯ ರಥಕ್ಕೆ ಸ್ವಾಗತ

0

ಚೆಂಬು ಗ್ರಾಮದ ಬಾಲೆಂಬಿಗೆ ಸುದ್ದಿ ಸ್ವಾತಂತ್ರ್ಯ ರಥವು ಆಗಮಿಸಿದಾಗ ಚೆಂಬು ಗ್ರಾಮ ಪಂಚಾಯತಿ ಸದಸ್ಯ ಆದಂ ಸಂಟ್ಯಾರ್ ಅವರ ನೇತೃತ್ವದಲ್ಲಿ ಸ್ವಾಗತಿಸಲಾಯಿತು.
ಈ ಬಾರಿಯ 75ನೇ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವದ ಪ್ರಯುಕ್ತ ಮನೆ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಬೇಕೆಂಬ ಸಂದೇಶವನ್ನು ಸಾರುವ ಸಲುವಾಗಿ ಸುದ್ದಿ ಸ್ವಾತಂತ್ರ್ಯ ರಥವು ಗ್ರಾಮಗ್ರಾಮಗಳಲ್ಲಿ ಸಂಚರಿಸುತ್ತಿದೆ.


ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಅವರು ಮಾತನಾಡಿ ಈ ಬಾರಿಯ 75ನೇ ಸ್ವಾತಂತ್ರ್ಯೋತ್ಸವದಂದು ಗ್ರಾಮದ ಪ್ರತೀ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ, ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವನ್ನು ಪ್ರತಿಯೊಬ್ಬರು ಹಬ್ಬದ ರೀತಿಯಲ್ಲಿ ಆಚರಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಸುದ್ದಿ ವರದಿಗಾರರುಗಳಾದ ಕೃಷ್ಣ ಬೆಟ್ಟ, ವಿನಯ್ ಜಾಲ್ಸೂರು ಉಪಸ್ಥಿತರಿದ್ದರು.