ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಬಿಲ್ಲವ ಸಂಘ ಹಾಗೂ ಬಿಲ್ಲವ ಬ್ರಿಗೇಡ್ ವತಿಯಿಂದ ರೂ. 45 ಲಕ್ಷ‌ ವೆಚ್ಷದ ಮನೆ ಕಟ್ಟಿಕೊಡಲು ನಿರ್ಧಾರ

0

 

ಮನೆಯವರ ಮೂಲಕವೇ ಗುತ್ತಿಗೆದಾರರಿಗೆ ಮುಂಗಡ ಹಣ ಪಾವತಿ

ಕಳೆದವಾರ ಹತ್ಯೆಗೀಡಾಗಿರುವ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿರುವ ಬಿಲ್ಲವ ಸಮಾಜ ಹಾಗೂ ಬಿಲ್ಲವ ಬ್ರಿಗೇಡ್ ನ ಪ್ರಮುಖರು ಪ್ರವೀಣ್ ಕುಟುಂಬಕ್ಕೆ ರೂ.45 ಲಕ್ಷ ವೆಚ್ಚದಲ್ಲಿ ಮನೆ ಕೊಟ್ಟಿಕೊಡುವ ಸಂಕಲ್ಪ ನೀಡಿದರಲ್ಲದೆ, ರೂ.7 ಲಕ್ಷ ಹಣವನ್ನು ಮನೆಯವರಿಗೆ ನೀಡಿ ಅದನ್ನು ಮನೆ ಕೆಲಸ ನಿರ್ವಹಿಸಲಿರುವ ಗುತ್ತಿಗೆದಾರರಿಗೆ ಮನೆಯವರಿಂದಲೇ ಹಸ್ತಾಂತರ ಮಾಡಿಸಿದರು.

ದಿ.ಪ್ರವೀಣ್ ನೆಟ್ಟಾರು ಬಿಲ್ಲವ ಸಮಾಜದಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಆ.3ರಂದು ಪ್ರವೀಣರ ಮನೆಗೆ ಬಿಲ್ಲವ ಮುಖಂಡರು ಮತ್ತು ಬಿಲ್ಲವ ಬ್ರಿಗೇಡ್ ನ ಪದಾಧಿಕಾರಿಗಳು ಮತ್ತು ಮುಖಂಡರು ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಹಾಗೂ ಪ್ರವೀಣ್ ಆಶಯದಂತೆ ಬಿಲ್ಲವ ಸಮಾಜದವರು ಸೇರಿಕೊಂಡು ರೂ.45 ಲಕ್ಷ ವೆಚ್ಚದ ಮನೆ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದ್ದಲ್ಲದೆ, ಮೊದಲ ಹಂತದ 7 ಲಕ್ಷ ರುಪಾಯಿಯ ಚೆಕ್ಕನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.


ಈ ಸಂದರ್ಭದಲ್ಲಿ ಭಾಸ್ಕರ್ ಕೋಟ್ಯಾನ್, ಉದ್ಯಮಿ ಶರತ್ ಚಂದ್ರ ಸನಿಲ್, ಗಂಗಾಧರ ಪೂಜಾರಿ , ಶಂಕರ್ ಕುಂದರ್ , ಸೂರಜ್ ಕಲ್ಯ ,ಸತೀಶ್ ಪೂಜಾರಿ , ಕಾವ್ಯಶ್ರೀ, ಹರೀಶ್ ಅಮೀನ್, ವಿಜಯ ಕುಮಾರ್ ಕಾರ್ಕಳ , ಸತೀಶ್ ನಾಯಕ್ , ಹರೀಶ್ ಮುನಿಯಾಲು ,ಅವಿನಾಶ್ ಸುವರ್ಣ ,ಜೀವನ್ ನೀರುಮಾರ್ಗ , ಕಿಶನ್ ಅಮೀನ್ , ದೀಪಕ್ ಮಂಗಳಾದೇವಿ ,ಪ್ರಶಾಂತ್ ಮಂಗಳದೇವಿ , ಸಂದೀಪ್ ಶಕ್ತಿನಗರ ,ಮೋಹನ್ ದಾಸ್ ವಾಮಂಜೂರು , ಜಗದೀಶ್ ಪೂಜಾರಿ ಸಾಣೂರು , ರತ್ನಾಕರ ಅಮೀನ್ ,ಪ್ರಕಾಶ್ ಕಾರ್ಕಳ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.