ಪ್ರವಾಹ ಬಾಧಿತ ಸಂತ್ರಸ್ತರಿಗೆ ಲಯನ್ಸ್ ಕ್ಲಬ್ ಸಹಾಯ ಹಸ್ತ

0
421

 

p>

ನಾಳೆ 150 ಕಿಟ್ ವಿತರಣೆ

ಭೀಕರ ಜಲ ಪ್ರವಾಹದಿಂದ ಸಂತ್ರಸ್ತರಾದ ಸಂಪಾಜೆ, ಕಲ್ಲುಗುಂಡಿ, ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರ, ಕಲ್ಮಕಾರ್ ಗಳ 150 ಕುಟುಂಬಗಳಿಗೆ ಲಯನ್ ಜಿಲ್ಲೆ 317- D ಮತ್ತು ಅಂತರಾಷ್ಟ್ರೀಯ ಲಯನ್ಸ್ ಸೇವಾ ನಿಧಿಯ ಜಂಟಿ ಸಹಕಾರದೊಂದಿಗೆ ರಾಜ್ಯಪಾಲರಾದ ಸಂಜೀತ್ ಶೆಟ್ಟಿಯವರ ನೇತೃತ್ವದಲ್ಲಿ ಆ.5 ರಂದು ಕಿಟ್ ವಿತರಣೆ ನಡೆಯಲಿದೆ.

ಸುಳ್ಯ ತಾಲ್ಲೂಕು ತಹಶೀಲ್ದಾರರು, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕರು ಹಾಗೂ ಕಂದಾಯ ಇಲಾಖಾಧಿಕಾರಿಗಳ ಉಪಸ್ಥಿತಿಯೊಂದಿಗೆ ಒಟ್ಟು 150 ಆಹಾರ ಕಿಟ್ ಗಳನ್ನು ಸಂತ್ರಸ್ತರಿಗೆ ವಿತರಿಸಲಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here