ಊರುಬೈಲು- ಮಾರ್ಪಡ್ಕ ಮೋರಿ ಹಾಗೂ ಸೇತುವೆ ಕುಸಿತಗೊಂಡ ಸ್ಥಳಕ್ಕೆ ಶಾಸಕ ಕೆ.ಜಿ. ಭೋಪಯ್ಯ ಭೇಟಿ – ಪರಿಶೀಲನೆ

0

 

ಕೊಡಗು ಸಂಪಾಜೆಯಿಂದ ಮಾರ್ಪಡ್ಕ ಸೇತುವೆ ಮೂಲಕ ಚೆಂಬು ಗ್ರಾಮದ ಊರುಬೈಲಿಗೆ ಸಂಪರ್ಕ ಕಲ್ಪಿಸುವ ಮಾರ್ಪಡ್ಕ ಎಂಬಲ್ಲಿ ನೀರಿನ ಸೆಳೆತಕ್ಕೆ ಆ.2ರಂದು ರಾತ್ರಿ ಮೋರಿಯೊಂದು ಕೊಚ್ಚಿಕೊಂಡು ಹೋಗಿದ್ದ ಸ್ಥಳಕ್ಕೆ ಹಾಗೂ ಆ.3ರಂದು ರಾತ್ರಿ ಮಾರ್ಪಡ್ಕ ಸೇತುವೆ ಕುಸಿತಗೊಂಡ ಸ್ಥಳಕ್ಕೆ ವಿರಾಜಪೇಟೆ ಶಾಸಕ ಕೆ.ಜಿ. ಭೋಪಯ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

ಶಾಸಕರೊಂದಿಗೆ ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎನ್.ಸಿ. ಅನಂತ ಸೇರಿದಂತೆ ಊರುಬೈಲು ನಿವಾಸಿಗಳು ಉಪಸ್ಥಿತರಿದ್ದರು.