ಅರಂತೋಡು : ಗಲ್ಫ್ ಮೀಟ್

0

 

ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ವತಿಯಿಂದ ಸೌದಿ ಅರೇಬಿಯಾದಲ್ಲಿ ಉದ್ಯೋಗ ದಲ್ಲಿರುವ ಆರಂತೋಡು ಜಮಾತ್ ಸೌದಿ ಸಮಿತಿಯ ಅಧ್ಯಕ್ಷ ಅಬ್ದುಲ್ ಅಝೀಜ್ ಮತ್ತು ಜಾವೀದ್ ಪೆಲ್ತಡ್ಕ ರವರಿಗೆ ಗಲ್ಫ್ ಮೀಟ್ ಕಾರ್ಯಕ್ರಮವು ಆಗಸ್ಟ್ 4ರಂದು ನಡೆಯಿತು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿ ಅಧ್ಯಕ್ಷತೆ ವಹಿಸಿದರು ಖತೀಬ್ ರಾದ ಹಾಜಿ ಇಸಾಕ್ ಬಾಖವಿ ದುವಾ ನೆರೆವೇರಿಸಿದರು.

ಗಲ್ಫ್ ಪ್ರತಿನಿಧಿಗಳಾದ ಅಬ್ದುಲ್ ಅಝೀಜ್ ಹಾಗೂ ಜಾವೀದ್ ತಮ್ಮ ಅನಿಸಿಕೆ ಗಳನ್ನು ವ್ಯಕ್ತಪಡಿಸಿದರು, ಜಮಾತ್ ಉಪಾಧ್ಯಕ್ಷ ಹಾಜಿ ಕೆ ಎಂ ಮೊಹಮ್ಮದ್, ನಿರ್ದೇಶಕರು ಗಳಾದ ಸಂಶುದ್ದೀನ್ ಫೆಲ್ತಡ್ಕ, ಎ ಹನೀಫ್, ಕೆ ಎಂ ಮೊಯಿದು ಕುಕ್ಕುಂಬಳ ಸಹಾಯಕ ಅಧ್ಯಾಪಕ ಹಾಜಿ ಸಾಜೀದ್ ಅಝ್ಹರಿ, ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷ ಆಶಿಕ್ ಕುಕ್ಕುಂಬಳ ಹಬೀಬ್ ಪಟೇಲ್, ಎಸ್ ಇ ಮೊಯಿದು ಕುಟ್ಟಿ, ಮೊಹಮ್ಮದ್ ಉಪಸ್ಥಿತರಿದ್ದರು ಜಮಾತ್ ಕಾರ್ಯದರ್ಶಿ ಕೆ ಎಂ ಮೂಸಾನ್ ಸ್ವಾಗತಿಸಿ, ಅಮೀರ್ ಕುಕ್ಕುಂಬಳ ವಂದಿಸಿದರು.