ಬೆಳ್ಳಾರೆಯಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ

0

 

 

ಶ್ರೀ ಸದಾಶಿವ ಚಾರಿಟೇಬಲ್ ಟ್ರಸ್ಟ್ ಬೆಳ್ಳಾರೆ ಇದರ ಆಡಳಿತಕ್ಕೆ ಒಳಪಟ್ಟ ಶ್ರೀ ಸದಾಶಿವ ಶಿಶುಮಂದಿರದ ಆಶ್ರಯದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ ಆ. 5ರಂದು ಅಜಪಿಲ ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ವೇ.ಮೂ. ಕಾಂಚೋಡು ಶಾಂತಕುಮಾರ ಭಟ್ಟರ ಮುಂದಾಳತ್ವದಲ್ಲಿ ನಡೆಯಿತು.

ಬೆಳಿಗ್ಗೆ ಕಲಶ ಸ್ಥಾಪನೆ ಬಳಿಕ ಪಾರಾಯಣ, ಕುಂಕುಮಾರ್ಚನೆ ನಡೆದು ಮಹಾಪೂಜೆ, ಮಂಗಳಾರತಿ ನಡೆಯಿತು. ವಿಶೇಷ ಆಕರ್ಷಣೆಯಾಗಿ ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ-ಮುಪ್ಪೇರ್ಯ ಇವರಿಂದ ಮಹಾಪೂಜೆಯ ಸಂದರ್ಭದಲ್ಲಿ ಚೆಂಡೆ ವಾದನ ಸೇವಾ ಕಾರ್ಯಕ್ರಮ ನಡೆಯಿತು. ಶ್ರೀ ಸದಾಶಿವ ಚಾರಿಟೇಬಲ್ ಸೊಸೈಟಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಜೋಶಿ, ಕಾರ್ಯದರ್ಶಿ ಶ್ರೀರಾಮ ಪಾಟಾಜೆ, ಮಾಜಿ ಅಧ್ಯಕ್ಷ ಮಹಾಲಿಂಗೇಶ್ವರ ಭಟ್ ಕುರುಂಬುಡೇಲು, ಕೋಶಾಧಿಕಾರಿ ರಾಜಾರಾಂ ಕಾವಿನಮೂಲೆ, ಶಿಶು ಮಂದಿರದ ಮಾತಾಜಿ ಶ್ರೀಮತಿ ತೇಜೇಶ್ವರಿ ಸೇರಿದಂತೆ ಚಾರಿಟೇಬಲ್ ಸೊಸೈಟಿಯ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸುಮಾರು 200 ರಷ್ಟು ಮಹಿಳೆಯರು ವರಮಹಾಲಕ್ಷ್ಮೀ ವೃತ ಪೂಜೆಯಲ್ಲಿ ಭಾಗವಹಿಸಿದ್ದರು.