ಸುದ್ದಿ ಸಮೂಹ ಸಂಸ್ಥೆ ಮತ್ತು ರಂಗಮಯೂರಿ ಕಲಾಶಾಲೆ ಸುಳ್ಯ ಪ್ರಸ್ತುತಪಡಿಸಿದ ಸ್ವಾತಂತ್ರ್ಯದ 75 ನೇ ಅಮೃತ ಮಹೋತ್ಸವದ ಅಂಗವಾಗಿ ನಡೆಸಿದ ‘ಜನ ಗಣ ಮನ’ ತಾಲೂಕು ಮಟ್ಟದ ದೇಶ ಭಕ್ತಿಗೀತೆ ಸ್ಪರ್ಧೆಯ ವಿಜೇತರ ಪಟ್ಟಿ ಪ್ರಕಟಗೊಂಡಿದೆ. 5ರಿಂದ 7ನೇ ತರಗತಿಯ ವಿಭಾಗದಲ್ಲಿ ಆದ್ಯತಾ ಅಡಿಕೆಹಿತ್ಲು ಪ್ರಥಮ, ತನ್ಮಯ್ ಸೋಮಯಾಗಿ ದ್ವಿತೀಯ, 8 ರಿಂದ 1೦ನೇ ತರಗತಿಯ ವಿಭಾಗದಲ್ಲಿ ವೀಕ್ಷಾ ವಾಲ್ತಾಜೆ ಪ್ರಥಮ, ಪ್ರತಿಕ್ಷಾ ಸಿ. ದ್ವಿತೀಯ, ಪಿಯುಸಿ ವಿಭಾಗದಲ್ಲಿ ಶ್ರೀಲಯ ಪ್ರಥಮ, ಅಭಿಜ್ಞಾ ಭಟ್ ದ್ವಿತೀಯ, ಪದವಿ ವಿಭಾಗದಲ್ಲಿ ಮೇಘ ಕೃಷ್ಣ ಕಾಯರ್ತೋಡಿ ಪ್ರಥಮ, ಅಕ್ಷಿತಾ ನೀರ್ಪಾಡಿ ದ್ವಿತೀಯ, ಸಾರ್ವಜನಿಕ ವಿಭಾಗದಲ್ಲಿ ರಾಜೇಶ್ ಎಸ್.ಎನ್.ಪ್ರಥಮ, ಸೌಮ್ಯ ರಾಘವೇಂದ್ರ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಬಹುಮಾನ ವಿತರಣೆ ಕಾರ್ಯಕ್ರಮವು ಆಗಸ್ಟ್ ೧೫ರಂದು ರಂಗಮಯೂರಿ ಕಲಾ ಶಾಲೆಯಲ್ಲಿ ನಡೆಯಲಿದೆ.
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.