ಸಂಪಾಜೆ: ಲಯನ್ಸ್ ಕ್ಲಬ್ ವತಿಯಿಂದ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವವರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ

0

 

p>

ಭೀಕರ ಜಲಸ್ಪೋಟದಿಂದಾಗಿ ಮನೆಗೆ ನೆರೆನೀರು ನುಗ್ಗಿ ಹಾನಿ ಸಂಭವಿಸಿದ ಕಲ್ಲುಗುಂಡಿ ಹಾಗೂ ಕೊಡಗು ಸಂಪಾಜೆ, ಕುಕ್ಕೆ ಸುಬ್ರಹ್ಮಣ್ಯ, ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರ ಕಲ್ಮಕಾರು ಲಯನ್ಸ್ ಕ್ಲಬ್ ವತಿಯಿಂದ ಆಹಾರ ಸಾಮಾಗ್ರಿಗಳ ಕಿಟ್ಟನ್ನು ಆ.5ರಂದು ವಿತರಿಸಲಾಯಿತು.


ಕೊಡಗು ಸಂಪಾಜೆ ಗ್ರಾಮದ ಕೊಯನಾಡು ಗಣಪತಿ ದೇವಾಲಯದ ಸಭಾಭವನದಲ್ಲಿ ಆಶ್ರಯ ಪಡೆಯುತ್ತಿರುವ ಕೊಯನಾಡಿನ ಏಳು ಕುಟುಂಬಗಳಿಗೆ ಹಾಗೂ ಗೂನಡ್ಕದ ಸಜ್ಜನ ಪ್ರತಿಷ್ಠಾನದ ಸಭಾಭವನದಲ್ಲಿ ಆಶ್ರಯ ಪಡೆಯುತ್ತಿರುವ ಹತ್ತು ಕುಟುಂಬಗಳಿಗೆ, ಕಲ್ಲುಗುಂಡಿಯಲ್ಲಿ ತೀವ್ರ ನೆರೆಹಾನಿ ಸಂಭವಿಸಿದ ಮನೆಗಳ 23 ಕುಟುಂಬಗಳಿಗೆ ಲಯನ್ಸ್ ಕ್ಲಬ್ ವತಿಯಿಂದ ಆಹಾರಸಾಮಾಗ್ರಿಗಳ ಕಿಟ್ ವಿತರಿಸಲಾಯಿತು.

 


ಲಯನ್ಸ್ ಕ್ಲಬ್ ಜಿಲ್ಲಾ 317 ಡಿ. ರಾಜ್ಯಪಾಲ ಸಂಜೀತ್ ಶೆಟ್ಟಿ ಪಿ.ಎಂ. ಜೆ.ಎಫ್. ಅವರು ಕಿಟ್ ವಿತರಿಸಿದರು. ಈ ಸಂದರ್ಭದಲ್ಲಿ ಲಯನ್ಸ್ ಪ್ರಾಂತೀಯ ಅಧ್ಯಕ್ಷೆ ಶ್ರೀಮತಿ ಸಂಧ್ಯಾ ಸಚಿತ್ ರೈ, ವಲಯ ಅಧ್ಯಕ್ಷ ಗಂಗಾಧರ ರೈ ಸೋಣಂಗೇರಿ, ಜಿಲ್ಲಾ ಲಯನ್ಸ್ ಪದಾಧಿಕಾರಿ ಜಯರಾಮ ದೇರಪ್ಪಜ್ಜನಮನೆ, ಸಂಪಾಜೆ ಲಯನ್ಸ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ನಳಿನಿ ಕಿಶೋರ್, ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ರೂಪಶ್ರೀ ಜೆ.ರೈ ಮತ್ತು ಸದಸ್ಯರುಗಳು, ಪಂಜ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಸಂತೋಷ್ ಜಾಕೆ ಸೇರಿದಂತೆ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here