ಮರ್ಕಂಜ : ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಮತ್ತು ಒಕ್ಕೂಟ ಪದಗ್ರಹಣ

0
280

 

p>

 

ಶ್ರೀ ಕ್ಷೇತ್ರ ಧ.ಗ್ರಾ.ಯೋ. ಬಿ.ಸಿ.ಟ್ರಸ್ಟ್‌ ಸಂಪಾಜೆ ವಲಯದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮರ್ಕಂಜ ಮತ್ತು ಗೋಳಿಯಡ್ಕ ಇದರ ಪದಗ್ರಹಣ ಸಮಾರಂಭ ಮತ್ತು ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ಇಂದು (ಅ.5) ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಲ್ಲಿ ನಡೆಯಿತು.

 


ಒಕ್ಕೂಟ ಪದಗ್ರಹಣ ಸಮಾರಂಭದ ಅಧ್ಯಕ್ಷತೆಯನ್ನು ಸಂಪಾಜೆ ವಲಯದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ರಾಧಾಕೃಷ್ಣ ಕೆ.ಪೆರುಮುಂಡ ವಹಿಸಿದ್ದರು.
ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕಮಾಲಕ್ಷ ಪುರ ಕಾರ್ಯಕ್ರಮ ಉದ್ಘಾಟಿಸಿದರು.


ವೇದಿಕೆಯಲ್ಲಿ ಅರಂತೋಡು ಜಿ.ಪಂ.ಕ್ಷೇತ್ರದ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ.ಟ್ರಸ್ಟ್ ಇದರ ಸುಳ್ಯದ ಯೋಜನಾಧಿಕಾರಿ ನಾಗೇಶ ಪಿ., ಪುರೋಹಿತ ಶ್ರೀಕೃಷ್ಣ ಉಪಾಧ್ಯಾಯ, ಮುಡ್ನೂರು ಮರ್ಕಂಜ ಶಾಲೆಯ ಮುಖ್ಯೋಪಾಧ್ಯಾಯ ದೇವರಾಜ್ ಉಪಸ್ಥಿತರಿದ್ದರು.
ಮರ್ಕಂಜ ಗ್ರಾ.ಪಂ. ಅಧ್ಯಕ್ಷೆ ಪವಿತ್ರ ಗುಂಡಿ, ಉಪಾಧ್ಯಕ್ಷ ಗೋವಿಂದ ಅಳವುಪಾರೆ, ಸಂಪಾಜೆ ವಲಯದ ಜನಜಾಗೃತಿ ವೇದಿಕೆ ಅಧ್ಯಕ್ಷ ಸತೀಶ್ ರಾವ್ ದಾಸರಬೈಲು, ಗೋಳಿಯಡ್ಕ ಒಕ್ಕೂಟದ ಅಧ್ಯಕ್ಷ ರಾಧಾಕೃಷ್ಣ ಗೌಡ, ಮರ್ಕಂಜ ಒಕ್ಕೂಟದ ಅಧ್ಯಕ್ಷ ಗೋಪಾಲ ಬಲ್ಕಡಿ, ಸೇವಾ ಪ್ರತಿನಿಧಿ ರೋಹಿಣಿ ಅಂಗಡಿಮಜಲು ಗೌರವ ಉಪಸ್ಥಿತಿಯಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವೃತ್ತಿಪರ ಶಿಕ್ಷಣ ಮಾಡುವ ಸಂಘದ ಸದಸ್ಯರ ಮಕ್ಕಳಿಗೆ ನೀಡುವ ಸುಜ್ಞಾನನಿಧಿ ಶಿಷ್ಯವೇತನದ ಮಂಜೂರಾತಿ ಪತ್ರವನ್ನು ಸಾಂಕೇತಿಕವಾಗಿ ಹಸ್ತಾಂತರ ಮಾಡಲಾಯಿತು.
ಗೋಳಿಯಡ್ಕ ಒಕ್ಕೂಟದ ಜತೆ ಕಾರ್ಯದರ್ಶಿ ಶಾಂತಾಪ್ಪ ರೈ ಅಂಗಡಿಮಜಲು ಸ್ವಾಗತಿಸಿದರು.
ಸೇವಾಪ್ರತಿನಿಧಿ ರೋಹಿಣಿ ಅಂಗಡಿಮಜಲು ವಂದಿಸಿದರು.
ಸಂಪಾಜೆ ವಲಯ ಮೇಲ್ವಿಚಾರಕ ಸುಧೀರ್ ನೆಕ್ರಾಜೆ ಕಾರ್ಯಕ್ರಮ ನಿರೂಪಿಸಿದರು.

ಒಕ್ಕೂಟ ಪದಗ್ರಹಣದ ಮೊದಲು
ಪೂಜೆ ನಡೆಯಿತು.

ಸಭೆಯಲ್ಲಿ ಸಂಘದ ಸದಸ್ಯರು, ಊರವರು, ದೇವಸ್ಥಾನದ ಭಕ್ತಾಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here