ಕಲ್ಲುಗುಂಡಿ: ಸಚಿವ ಎಸ್. ಅಂಗಾರರಿಂದ ನೆರೆಹಾನಿ ಸಂಭವಿಸಿದ ಮನೆಯವರಿಗೆ ಪರಿಹಾರದ ಚೆಕ್ ವಿತರಣೆ

0

 

ವಿರಾಜಪೇಟೆ ಶಾಸಕ ಕೆ.ಜಿ. ಭೋಪಯ್ಯ, ತಹಶಿಲ್ದಾರ್, ಇ.ಒ. ಉಪಸ್ಥಿತಿ

ಕಲ್ಲುಗುಂಡಿ ಪರಿಸರದಲ್ಲಿ ಜಲಸ್ಪೋಟದಿಂದಾಗಿ ನೆರೆಹಾನಿ ಸಂಭವಿಸಿದ ಮನೆಯವರಿಗೆ ಸಚಿವ ಎಸ್. ಅಂಗಾರ ಅವರು ಆ.5ರಂದು ಭೇಟಿ ನೀಡಿ ರೂ. ಹತ್ತು ಸಾವಿರ ರೂ. ಪರಿಹಾರದ ಚೆಕ್ ವಿತರಿಸಿದರು.
ಈ ಸಂದರ್ಭದಲ್ಲಿ ವಿರಾಜಪೇಟೆ ಶಾಸಕ ಕೆ.ಜಿ. ಭೋಪಯ್ಯ, ತಹಶಿಲ್ದಾರ್ ಕು. ಅನಿತಾಲಕ್ಷ್ಮಿ, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಭವಾನಿಶಂಕರ, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಸಂಪಾಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಜಿ.ಕೆ. ಹಮೀದ್, ಸಂಪಾಜೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಎಸ್. ಪಿ. ಲೋಕನಾಥ್ ಕಲ್ಲುಗುಂಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.