ಸುಬ್ರಹ್ಮಣ್ಯದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ

0

 

ರೋಟರಿ ಕ್ಲಬ್ ಸುಬ್ರಹ್ಮಣ್ಯ ,ಆನಂದಾಶ್ರಮ ಸೇವಾಟ್ರಸ್ಟ್ ಪುತ್ತೂರು ,ಇನ್ನರ್ ವೀಲ್ ಕ್ಲಬ್ ಸುಬ್ರಹ್ಮಣ್ಯ, ಗ್ರಾಮ ಪಂಚಾಯತ್ ಸುಬ್ರಹ್ಮಣ್ಯ, ರೋಟರಿ ಕ್ಲಬ್ ಬಂಟ್ವಾಳ ,ಇವುಗಳ ಸಹಭಾಗಿತ್ವದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರವು ಇಂದು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರಗಿತು. ಶಿಬಿರದ ಉದ್ಘಾಟನೆಯನ್ನು ಆನಂದಾಶ್ರಮ ಸೇವಾಟ್ರಸ್ಟ್ಪುತ್ತೂರಿನ ಡಾ। ಗೌರಿ ಪೈ ಪಿ ಇವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟನೆಯನ್ನು ನೆರವೇರಿಸಿದರು. ಉದ್ಘಾಟನಾ ಮಾತುಗಳಲ್ಲಿ ಗ್ರಾಮೀಣ ಭಾಗದ ಬಡವರಿಗೆ ಮಧ್ಯಮ ವರ್ಗದವರಿಗೆ ನಿರ್ಗತಿಕರಿಗೆ ಸಂಘ ಸಂಸ್ಥೆಗಳೊಳಗೂಡಿ ಇಂತಹ ಉಚಿತ ನೇತ್ರ ಚಿಕಿತ್ಸಾ ಶಿಬಿರಗಳನ್ನು ಹಮ್ಮಿಕೊಂಡಿ ಇರುವುದು ತುಂಬಾ ಪ್ರಯೋಜನಕಾರಿ ಇದರ ಸದುಪಯೋಗವನ್ನು ಎಲ್ಲ ಫಲಾನುಭವಿಗಳು ಪಡೆದುಕೊಳ್ಳಬೇಕಾಗಿ ವಿನಂತಿಸಿದರು .

ಸಭಾಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷ ರೊ. ಗೋಪಾಲ್ ಎಣ್ಣೆಮಜಲು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ಅಸಿಸ್ಟೆಂಟ್ ಗವರ್ನರ್ ರೊ. ಶಿವರಾಮ್ ಏನೆಕಲ್ ,ವೆನ್ಲಾಕ್ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಕಣ್ಣಿನ ಚಿಕಿತ್ಸಾ ತಜ್ಞರಾದ ಡಾ। ಅನಿಲ್ ರಾಮಾನುಜಮ್, ಸುಬ್ರಹ್ಮಣ್ಯಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ ಗುಂಡ್ಯಡ್ಕ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಸರೋಜಾ ಮಾಯಿಲಪ್ಪ , ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯ ರೊ. ವೆಂಕಟೇಶ್ ಎಚ್. ಎಲ್ .ಉಪಸ್ಥಿತರಿದ್ದರು .ರೋಟರಿ ಕ್ಲಬ್ ಪೂರ್ವಾಧ್ಯಕ್ಷ ರೊ.ರಾಮಕೃಷ್ಣ ಮಲ್ಲಾರ ನಿರೂಪಿಸಿದ ಕಾರ್ಯಕ್ರಮದ ಕೊನೆಗೆ ಕಾರ್ಯದರ್ಶಿ ರವಿ ಕಕ್ಕೆಪದವು ವಂದಿಸಿದರು . ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸಂಯೋಜಕರಾದ ಲವಿನಾ ಅವರು ಅಂಗಾಂಗ ದಾನದ ಬಗ್ಗೆ ಮಾಹಿತಿಯನ್ನು ನೀಡಿದರು .ಸುಬ್ರಹ್ಮಣ್ಯ ಐನೆಕಿದು ಏನೆಕಲ್ಲು ದೇವರಗದ್ದೆ ಕಲ್ಲಾಜೆ ನೂಚಿಲ ಕುಲ್ಕುಂದ ಆಸುಪಾಸಿನ ನೂರಾರು ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆದರು .ಅಗತ್ಯವುಳ್ಳವರಿಗೆ ಉಚಿತವಾಗಿ ಕನ್ನಡಕಗಳನ್ನು ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು ಇವರು ವಿತರಿಸಿದರು .ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ ಸಿಬ್ಬಂದಿ ವರ್ಗದವರು ರೋಟರಿ ಕ್ಲಬ್ಬಿನ ಸದಸ್ಯರು ಇನ್ನರ್ ವೀಲ್ ಕ್ಲಬ್ ಸದಸ್ಯರು ಸಹಕರಿಸಿದರು .