ಸುಳ್ಯ ಸಿ.ಎ. ಬ್ಯಾಂಕ್ ಗೆ ಡಿ.ಸಿ.ಸಿ. ಬ್ಯಾಂಕ್ ವಿಶೇಷ ಪ್ರೋತ್ಸಾಹಕ ಪ್ರಶಸ್ತಿ

0

 

ಸುಳ್ಯ‌ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ವ್ಯವಸಾಯಿಕ ಸಂಘ (ಸಿ.ಎ. ಬ್ಯಾಂಕ್) ಕ್ಕೆ ಡಿ.ಸಿ.ಸಿ. ಬ್ಯಾಂಕ್ ವಿಶೇಷ ಪ್ರೋತ್ಸಾಹಕ ಪ್ರಶಸ್ತಿ ‌ಲಭಿಸಿದೆ.

ಆ.5 ರಂದು‌ ಮಂಗಳೂರಿನಲ್ಲಿ ನಡೆದ ಡಿ.ಸಿ.ಸಿ. ಬ್ಯಾಂಕ್ ಮಹಾಸಭೆಯಲ್ಲಿ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಪ್ರಶಸ್ತಿ ಪ್ರದಾನ ಗೈದರು. ಸುಳ್ಯ ಸಿ.ಎ. ಬ್ಯಾಂಕ್ ಅಧ್ಯಕ್ಷ ಬಾಲಗೋಪಾಲ ಸೇರ್ಕಜೆ ಹಾಗೂ‌ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುದರ್ಶನ್ ಸೂರ್ತಿಲ ಪ್ರಶಸ್ತಿ ಸ್ವೀಕರಿಸಿದರು.
ಸಿ.ಎ. ಬ್ಯಾಂಕ್ ಮಾಜಿ ಅಧ್ಯಕ್ಷ ಹರೀಶ್ ‌ಬೂಡುಪನ್ನೆ, ನಿರ್ದೇಶಕ ಅಬ್ದುಲ್ ಕುಂಞಿ ನೇಲ್ಯಡ್ಕ ಇದ್ದರು.