ಬಡ್ಡಡ್ಕ: ಸುದ್ದಿ ಸ್ವಾತಂತ್ರ್ಯ ರಥಕ್ಕೆ ಸ್ವಾಗತ ಕೋರಿದ ಗ್ರಾಮಸ್ಥರು

0

 

ಆಲೆಟ್ಟಿ ಗ್ರಾಮದ ಬಡ್ಡಡ್ಕಕ್ಕೆ ಸುದ್ದಿ ಸ್ವಾತಂತ್ರ್ಯ ರಥವು ಆಗಮಿಸಿದಾಗ ಗ್ರಾಮದ ನಿವಾಸಿಗಳು ಸ್ವಾಗತಿಸಿದರು.

ಈ ಬಾರಿಯ 75ನೇ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವದ ಪ್ರಯುಕ್ತ ಮನೆ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಬೇಕೆಂಬ ಸಂದೇಶವನ್ನು ಸಾರುವ ಸಲುವಾಗಿ ಸುದ್ದಿ ಸ್ವಾತಂತ್ರ್ಯ ರಥವು ಗ್ರಾಮಗ್ರಾಮಗಳಲ್ಲಿ ಸಂಚರಿಸುತ್ತಿದೆ.
ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಮಾತನಾಡಿದರು. ಊರವರಾದ ದಿನೇಶ್ ಬಡ್ಡಡ್ಕ, ಪ್ರಸನ್ನ,ನವೀನ್ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸುದ್ದಿ ಪತ್ರಿಕೆಯ ರಮೇಶ್ ನೀರಬಿದಿರೆ, ಶಿವಪ್ರಸಾದ್ ಕೇರ್ಪಳ,ರೇಖಾ ಸುಭಾಸ್,ಕಾರ್ತಿಕ್ ಉಪಸ್ಥಿತರಿದ್ದರು.