ಕಲ್ಮಕಾರು : ನೆರೆ ಸಂತ್ರಸ್ತ ಘಟನೆಗೆ ಮಿಡಿಯಿತು ಹಾಲಿ ಸೈನಿಕನ ಹೃದಯ

0
969

 

p>

ಟ್ರಸ್ಟ್ ಮೂಲಕ ಮನೆಗೆ ತೆರಳಿ ಸಹಾಯ ಧನ ವಿತರಣೆ

ಸುದ್ದಿ ಚಾನೆಲ್ ಹಾಗೂ ಇತರ ಮಾಧ್ಯಮಗಳಲ್ಲಿ ಬಂದ ಮನ ಮಿಡಿಯುವ ವರದಿ ನೋಡಿದ ದೇಶದ ಹಾಲಿ ಸೈನಿಕ ರವಿಚಂದ್ರ ಛತ್ರಪ್ಪಾಡಿ ಅವರು ಗುತ್ತಿಗಾರು ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಸಂಘಟಕರನ್ನು ಸಂಪರ್ಕ ಮಾಡಿ ಘಟನೆಯ ಮಾಹಿತಿ ತಿಳಿದು ಧನಸಹಾಯ ನೀಡಿದ ಘಟನೆ ವರದಿಯಾಗಿದೆ.

ಬಡ ಕುಟುಂಬದ ಮನೆಗೆ ಭೇಟಿ ಮಾಡಿ ತನ್ನ ದೇಣಿಗೆಯನ್ನು ಟ್ರಸ್ಟ್ ಮುಖೇನ ಮನೆಯವರಿಗೆ ಹಸ್ತಾಂತರ ಮಾಡಿ ಮಾನವೀಯತೆ ಮೆರೆದಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಅಲ್ಲದೆ ಇದೇ ಸಂದರ್ಭ ಮನೆಯವರು ಮತ್ತು ಅಲ್ಲಿ ನೆರೆದಿದ್ದವರು ಹಾಲಿ ಸೈನಿಕರಿಗೆ ಕೊಟ್ಟ ಗೌರವ ಕಂಡು ನಿಬ್ಬೆರಗಾದರು. ಘಟನೆಗಳ ಕಣ್ಣಾರೆ ಕಂಡು ಮರುಗಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ, ಸದಸ್ಯ ಮೋಹನ್ ದಾಸ್ ಶಿರಾಜೆ . ಕೊಲ್ಲಮೊಗ್ರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಕಲ್ಮಕಾರು, ಗ್ರಾಮ ಪಂಚಾಯತ್ ಸದಸ್ಯ ಅಶ್ವಥ್ ಯಾಳದಳು, ದೀಕ್ಷಿತ್ ಕಲ್ಮಕಾರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here