ಆ. 14 : ತಾಲೂಕು ಮೊಗೇರ ಯುವ ವೇದಿಕೆ ವತಿಯಿಂದ  ಮರ್ಕಂಜದಲ್ಲಿ ಕೆಸರುಗದ್ದೆ ಕ್ರೀಡಾಕೂಟ

0

 

ಸುಳ್ಯ ತಾಲೂಕು ಮೊಗೇರ ಯುವ ವೇದಿಕೆ ವತಿಯಿಂದ ಆ. 14 ರಂದು ಮರ್ಕಂಜದ ಪನ್ನೆ ಅಮ್ಮುಣಿ ಎಂಬವರ ಗದ್ದೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟ ಹಾಗೂ ಆಟಿ ಆಚರಣೆ ನಡೆಯಲಿದೆ.

ಸುಳ್ಯ ತಾಲೂಕಿನ ಮೊಗೇರ ಬಾಂಧವರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪುರುಷರಿಗೆ ವಾಲಿಬಾಲ್ , ಹಗ್ಗಜಗ್ಗಾಟ , ಮಹಿಳೆಯರಿಗೆ ತ್ರೋಬಾಲ್ , ಹಗ್ಗಜಗ್ಗಾಟ ಹಾಗೂ ವಿವಿಧ ವಯೋಮಾನದವರಿಗಾಗಿ ಸ್ಪರ್ಧೆಗಳು ನಡೆಯಲಿದೆ.
ಕಾರ್ಯಕ್ರಮದಲ್ಲಿ ಆಟಿ ಆಚರಣೆ ಜೊತೆಗೆ ಆಟಿಯ ವಿವಿಧ ಬಗೆಯ ತಿನಿಸುಗಳು ಮಧ್ಯಾಹ್ನದ ಭೋಜನದಲ್ಲಿ ಇರಲಿದೆ.