ಪ್ರವೀಣ್ ನೆಟ್ಟಾರು ಹತ್ಯೆಯ ಪ್ರಧಾನ ಆರೋಪಿಗಳ ಸುಳಿವು ಲಭ್ಯ

0
8404

 

p>

ಹಂತಕರು ಕೇರಳದವರಲ್ಲ – ಸುಳ್ಯ ಬೆಳ್ಳಾರೆಯವರೇ

ಬಿ.ಜೆ.ಪಿ. ಯುವ ಮೋರ್ಚಾ ಮುಂದಾಳು ಬೆಳ್ಳಾರೆ ಪ್ರವೀಣ್ ನೆಟ್ಟಾರು ಹತ್ಯೆ ನಡೆಸಿದವರ ಸ್ಪಷ್ಟ ಸುಳಿವು ಪೋಲೀಸರಿಗೆ ಲಭ್ಯವಾಗಿದೆ. ಅದನ್ನು ಇಂದು ಸ್ವತಃ ಗೃಹ ಸಚಿವರೇ ಬೆಂಗಳೂರಿನಲ್ಲಿ ಬಾಯಿ ಬಿಟ್ಟಿದ್ದಾರೆ.
ಹಂತಕರು ಕೇರಳದವರಲ್ಲ – ಸ್ಥಳೀಯರೇ ಆಗಿದ್ದು ತಪ್ಪಿಸಿಕೊಂಡಿರುವ ಅವರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆಂದು ವರದಿಯಾಗಿದೆ.
ಸುಳ್ಯದವರೊಬ್ಬರು, ಬೆಳ್ಳಾರೆಯವರೊಬ್ಬರು ಈ ಕೃತ್ಯದಲ್ಲಿದ್ದಾರೆಂದು ಹೇಳಲಾಗುತ್ತಿದ್ದು, ಅವರು ತಮ್ಮ ಮೊಬೈಲ್ ಗಳನ್ನು ಮನೆಗಳಲ್ಲೇ ಬಿಟ್ಟು ಪರಾರಿಯಾಗಿದ್ದಾರೆಂದೂ, ಪೋಲೀಸರ ಕಣ್ಣಿಗೆ ಸಿಗದಂತೆ ಅಡಗಿದ್ದಾರೆಂದೂ ಹೇಳ ಲಾಗುತ್ತಿದೆ.

LEAVE A REPLY

Please enter your comment!
Please enter your name here