ವರ್ಗಾವಣೆಗೊಂಡ ಹಿರಿಯ ಸಿವಿಲ್ ನ್ಯಾಯಾಧೀಶರಿಗೆ ಸುಳ್ಯ ವಕೀಲರ ಸಂಘದ ವತಿಯಿಂದ ಬೀಳ್ಕೊಡುಗೆ 

0

 

 

ಸುಳ್ಯ ನ್ಯಾಯಾಲಯದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾಗಿ ಕಳೆದ ಒಂದು ವರ್ಷಗಳಿಂದ ಸೇವೆ ಸಲ್ಲಿಸಿ ಇದೀಗ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿರುವ ಹಿರಿಯ ಸಿವಿಲ್ ನ್ಯಾಯಾಧೀಶ ಸೋಮರಶೇಖರ ಎ. ರವರಿಗೆ ಸುಳ್ಯ ತಾಲೂಕು ವಕೀಲರ ಸಂಘದ ವತಿಯಿಂದ ಬೀಳ್ಕೊಡುಗೆ ಸಮಾರಂಭ ಇಂದು ನಡೆಯಿತು.

ಈ ಕಾರ್ಯಕ್ರಮವನ್ನು ಸುಳ್ಯವಕೀಲರ ಸಂಘದ ಸಭಾಭವನದಲ್ಲಿ ನಡೆಸಲಾಯಿತು.
ನ್ಯಾಯಾಧೀಶ ಸೋಮಶೇಖರ್ ರವರು ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಲಘು ವ್ಯವಹಾರಗಳ ನ್ಯಾಯಾಧೀಶರು ಮತ್ತು ಅಪರ ಮುಖ್ಯ ಮಹಾನಗರ ದಂಡಾಧಿಕಾರಿಯಾಗಿ ವರ್ಗಾವಣೆಗೊಂಡಿರುತ್ತಾರೆ.
ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ವಕೀಲರ ಸಂಘದ ಅಧ್ಯಕ್ಷ ಕೆ ನಾರಾಯಣ ಪಾಟಾಳಿ ವಹಿಸಿದ್ದರು.


ವೇದಿಕೆಯಲ್ಲಿ ಉಪಸ್ಥಿತರಿದ್ದ ಸುಳ್ಯ ನ್ಯಾಯಾಲಯದ ಕಿರಿಯ ಸಿವಿಲ್ ನ್ಯಾಯಾಧೀಶೆ ಕು. ಅರ್ಪಿತಾ, ಎಪಿಪಿ ಜನಾರ್ದನ್, ಅಧ್ಯಕ್ಷ ಕೆ ನಾರಾಯಣ ಪಾಟಾಳಿ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಿರಿಯ ವಕೀಲರುಗಳಾದ ಡಿ ವೆಂಕಪ್ಪ ಗೌಡ, ಎಂ ವೆಂಕಪ್ಪಗೌಡ, ರವೀಂದ್ರನಾಥ ಕೆ, ಜಗದೀಶ್ ಹುದೇರಿ ಈ ಸಂದರ್ಭದಲ್ಲಿ ಮಾತನಾಡಿ ವರ್ಗಾವಣೆಗೊಂಡ ನ್ಯಾಯಾಧೀಶರ ಸೇವಾ ಅವಧಿಯಲ್ಲಿ ಮಾಡಿರುವ ಕಾರ್ಯ ಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ಅವರ ಜೀವನಕ್ಕೆ ಶುಭ ಹಾರೈಸಿದರು.
ನಂತರ ಸಂಘದ ವತಿಯಿಂದ ನ್ಯಾಯಾಧೀಶರನ್ನು ಸನ್ಮಾನಿಸಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ನ್ಯಾಯಾಧೀಶರು ಕಳೆದ ಒಂದು ವರ್ಷಗಳಿಂದ ಸುಳ್ಯದಲ್ಲಿ ಒಳ್ಳೆಯ ರೀತಿಯಲ್ಲಿ ಸೇವೆ ಸಲ್ಲಿಸಲು ಎಲ್ಲಾ ವಕೀಲರುಗಳ ಸಹಕಾರ ಉತ್ತಮ ರೀತಿಯಲ್ಲಿ ಲಭಿಸಿದೆ.
ಹಿರಿಯ ವಕೀಲರುಗಳು ಕಿರಿಯ ವಕೀಲರುಗಳಿಗೆ ಹೆಚ್ಚಿನ ಅವಕಾಶಗಳನ್ನು ನೀಡಿ ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕೆಂದು ಹೇಳಿದರು.
ನೂತನವಾಗಿ ಬಂದಿರುವ ಕಿರಿಯ ನ್ಯಾಯಾಲಯದ ನ್ಯಾಯಾಧೀಶರೀಗೆ ಉತ್ತಮವಾಗಿ ಸೇವೆಯನ್ನು ಮಾಡಲು ಸಹಕರಿಸುವಂತೆ ಕೇಳಿಕೊಂಡರು.

ಸಮಾರಂಭದಲ್ಲಿ ವಕೀಲರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು, ಹಿರಿಯ ಕಿರಿಯ ವಕೀಲರುಗಳು, ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ವಕೀಲ ವಿನಯ ಮುಳುಗಾಡು ಸ್ವಾಗತಿಸಿ ಹಿರಿಯ ವಕೀಲರಾದ ದಳ ಸುಬ್ರಾಯ ಭಟ್ ಕಾರ್ಯಕ್ರಮ ನಿರೂಪಿಸಿ ದೀಪಕ್ ಕುತ್ತಮೊಟ್ಟೆ ವಂದಿಸಿದರು.