ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಬಾಲಿವುಡ್ ನಿರ್ಮಾಪಕ ಮನೀಶ್ ಮುಂದ್ರಾ 11 ಲಕ್ಷ ರೂ. ನೆರವು

0

 

ಬಿಜೆಪಿ ಯುವ ಮೋರ್ಚಾ ಮುಂದಾಳು ಪ್ರವೀಣ್ ನೆಟ್ಟಾರು ಹತ್ಯೆಯನ್ನು ಖಂಡಿಸಿರುವ ಬಾಲಿವುಡ್ ನಿರ್ಮಾಪಕ, ಉದ್ಯಮಿ ಮನೀಶ್ ಮುಂದ್ರಾ ಅವರು ಪ್ರವೀಣ್ ಕುಟುಂಬಕ್ಕೆ 11 ಲಕ್ಷ ರೂ. ನೆರವು ನೀಡಿರುವುದಾಗಿ ಟ್ವೀಟ್ ಮಾಡಿದ್ದಾರೆ.

 

ಪ್ರವೀಣ್ ಕುಟುಂಬದ ಬ್ಯಾಂಕ್ ಖಾತೆಯ ಮಾಹಿತಿಯನ್ನು ಇತ್ತೀಚೆಗಷ್ಟೇ ಅವರು ಟ್ವೀಟರ್‌ನಲ್ಲಿ ಕೇಳಿದ್ದರು. ಆ ಬಳಿಕ 11 ಲಕ್ಷ ರೂ.ಗಳನ್ನು ಪ್ರವೀಣ್ ಪತ್ನಿ ನೂತನಾ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಿರುವುದಾಗಿ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಮನೀಶ್ ಮುಂದ್ರಾ ಅವರು ಅಂಖೋನ್ ದೇಖಿ, ಮಸಾನ್, ಕದ್ವಿ ಹವಾ ಸೇರಿದಂತೆ ವಿವಿಧ ಬಾಲಿವುಡ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. 2017ರಲ್ಲಿ ಅವರ ನಿರ್ಮಾಣದ ಧನಕ್ ಅತ್ಯುತ್ತಮ ಮಕ್ಕಳ ಚಲನಚಿತ್ರ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿತ್ತು. ಅಲ್ಲದೆ, ನ್ಯೂಟನ್ ಚಿತ್ರ ಆಸ್ಕರ್‍ ಪ್ರಶಸ್ತಿಗೆ ಪ್ರವೇಶ ಪಡೆದಿತ್ತು. ಅಸಹಾಯಕರಿಗೆ ನೆರವಾಗುವ ಕೆಲಸದಲ್ಲಿಯೂ ತೊಡಗಿಸಿಕೊಂಡಿರುವ ಮುಂದ್ರಾ, ಕೊರೊನಾ ಸಂದರ್ಭದಲ್ಲಿ ವಿವಿಧ ಆಸ್ಪತ್ರೆಗಳಿಗೆ ಪಿಪಿಇ ಕಿಟ್‌ಗಳನ್ನು ಒದಗಿಸಿಕೊಟ್ಟಿದ್ದರು.